ಮೊದಲ ಬಾರಿಗೆ ಪರಿಸರ ಸ್ನೇಹಿ ವಿಮಾನ ಪರಿಚಯಿಸಿದ ಆಕಾಶ ಏರ್‌ಲೈನ್‌

ಬುಧವಾರ, 2 ಆಗಸ್ಟ್ 2023 (09:04 IST)
ಚಿಕ್ಕಬಳ್ಳಾಪುರ : ಕಡಿಮೆ ಇಂಧನ ಉಗುಳುವ, ದೇಶದಲ್ಲೇ ಮೊದಲ ಪರಿಸರ ಸ್ನೇಹಿ  ಬೋಯಿಂಗ್ ವಿಮಾನವನ್ನು ಆಕಾಶ ಏರ್ಲೈನ್ಮಂಗಳವಾರ ಪರಿಚಯಿಸಿದೆ.
 

ಪರಿಸರ ಸ್ನೇಹಿ ಬೋಯಿಂಗ್  737 MAX, 737-8-200 ವಿಮಾನವು ಇಂದು ಬೆಳಗ್ಗೆ 9:31ಕ್ಕೆ ಬೆಂಗಳೂರಿಗೆ ಆಗಮಿಸಿತು. ಈ ನೂತನ ವಿಮಾನ  ಅಮೆರಿಕದ ಸಿಯಾಟಲ್ನಿಂದ ಹೊರಟು ಇಂದು ಬೆಂಗಳೂರಿಗೆ ಬಂದು ತಲುಪಿದೆ.

ಕಳೆದ ವರ್ಷದ ತನ್ನ ವಿಮಾನಯಾವನ್ನು ಪ್ರಾರಂಭಿಸಿದ ಆಕಾಶ ವಿಮಾನ ಸಂಸ್ಥೆಯು ಒಂದು ವರ್ಷದೊಳಗೆ 20 ವಿಮಾನವನ್ನು ವಿವಿಧ ಮಾರ್ಗಗಳಿಗೆ ತೆರೆದಿದೆ.  ವಿದೇಶಗಳಿಗೆ ವಿಮಾನ ಸೇವೆ ನೀಡಬೇಕಾದರೆ ಕನಿಷ್ಠ 20 ವಿಮಾನಗಳನ್ನು ಹೊಂದಿರಬೇಕು ಎಂಬ ನಿಯಮ ಭಾರತದಲ್ಲಿದೆ. ಈಗ 20 ವಿಮಾನಗಳನ್ನು ಹೊಂದುವ ಮೂಲಕ ಅಕಾಶ ಏರ್ ಇನ್ನು ಮುಂದೆ ವಿದೇಶಕ್ಕೂ ಸೇವೆ ನೀಡಲು ಅರ್ಹತೆ ಪಡೆದುಕೊಂಡಿದೆ.

ಈ ಕುರಿತು ಮಾತನಾಡಿದ ಆಕಾಶ ಏರ್ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಯ್ ದುಬೆ, ಆಕಾಶ ವಿಮಾನಯಾನ ಪ್ರಾರಂಭಗೊಂಡ ಒಂದೇ ವರ್ಷದಲ್ಲಿ ತನ್ನ ವಿಮಾನಗಳ ಸಂಖ್ಯೆಯನ್ನು 20ಕ್ಕೆ ಹೆಚ್ಚಿಸಿಕೊಂಡಿರುವುದು ಹೆಮ್ಮೆ ಎನಿಸುತ್ತಿದೆ. ಅದೂ ಅಲ್ಲದೆ, ಮೊದಲ ಬಾರಿಗೆ ಬೋಯಿಂಗ್ 737 MAX ವಿಮಾನ ಪಡೆದ ಸಂಸ್ಥೆಯೂ ನಮ್ಮದಾಗಿದೆ. ಈ ಬೋಯಿಂಗ್ನ ವಿಶೇಷತೆ ಎಂದರೆ, ಇದು ಸಾಮಾನ್ಯ ಎಂಜಿನ್ಗಿಂತ ಶೇ.20 ರಷ್ಟು ಕಡಿಮೆ ಇಂಧನ ಉಗುಳಲಿದ್ದು, ಹೆಚ್ಚು ಪರಿಸರ ಸ್ನೇಹಿ ವಿಮಾನವಾಗಲಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ