ರಾಜ್ಯ ಸರ್ಕಾರದ ‘ಅಕ್ಕ ಕೆಫೆ’ ಯೋಜನೆಯ ಡೀಟೈಲ್ಸ್ ಇಲ್ಲಿದೆ

Krishnaveni K

ಶನಿವಾರ, 24 ಫೆಬ್ರವರಿ 2024 (13:26 IST)
Photo Courtesy: Twitter
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರ ಮಹಿಳೆಯರ ಸ್ವಾವಲಂಬಿ ಬದುಕಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ‘ಅಕ್ಕ ಕೆಫೆ’ ಎನ್ನುವ ಯೋಜನೆಗೆ ಚಾಲನೆ ನೀಡಿದೆ. ಹಾಗಿದ್ದರೆ ಅಕ್ಕ ಕೆಫೆ ಯೋಜನೆ ಎಂದರೇನು, ಯಾರಿಗೆ ಲಾಭ ಇಲ್ಲಿದೆ ಮಾಹಿತಿ.

ಅಕ್ಕ ಕೆಫೆ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಇದನ್ನು ಕಾರ್ಯಗತಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಅದರ ಮೊದಲ ಹಂತವಾಗಿ ಅಕ್ಕ ಕೆಫೆ ಲಾಂಛನವನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಸುಮಾರು 2,500 ಕಾಫಿ ಕಿಯೋಸ್ಕ್ ಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ. ಇದರಿಂದ ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮದೇ ಉದ್ಯಮದಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.

ಅಕ್ಕ ಕೆಫೆ ಯೋಜನೆಯಡಿ ಮಹಿಳೆಯರಿಗೆ ತಮ್ಮದೇ ಆಹಾರೋದ್ಯಮ ಸ್ಥಾಪಿಸಲು ಬೇಕಾದ ತರಬೇತಿಯನ್ನೂ ನೀಡಲಾಗುತ್ತದೆ. ಆ ಮೂಲಕ ಅಕ್ಕ ಕೆಫೆಯನ್ನು ಮಹಿಳೆಯರಿಗೆಂದೇ ಮಾಡಲಾಗಿದೆ. ಮಹಿಳೆಯರಿಗೆ ಸೂಕ್ತ ತರಬೇತಿ ಜೊತೆಗೆ ತಾಂತ್ರಿಕ ಬೆಂಬಲಗಳನ್ನೂ ನೀಡಲಾಗುತ್ತದೆ.

ಪ್ರಮುಖ ಪ್ರವಾಸೀ ತಾಣಗಳು, ಜನನಿಬಿಡ ಸ್ಥಳಗಳು ಸರ್ಕಾರಿ ಆಸ್ಪತ್ರೆ ಆವರಣ ಮುಂತಾದೆಡೆ ಈ ಕೆಫೆಗಳು ಸದ್ಯದಲ್ಲಿಯೇ ಆರಂಭವಾಗಲಿದೆ. ಇಡೀ ರಾಜ್ಯದಲ್ಲಿ ಅಕ್ಕ ಕೆಫೆಗೆ ಒಂದೇ ಲಾಂಛನವಿರಲಿದೆ. ಮಹಿಳೆಯರನ್ನು ಸ್ವಾವಲಂಬಿಗಳಾಗಿ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗುತ್ತದೆ. ಈ ಬ್ರ್ಯಾಂಡ್ ನಡಿಯಲ್ಲಿ ಆಹಾರೋದ್ಯಮ ಸಂಸ್ಥೆ ಕಟ್ಟಿ ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಹೆಸರು ಮಾಡಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ