ಮೈಲಾರ ಕ್ಷೇತ್ರಕ್ಕೆ ಮದ್ಯವ್ಯಸನಿ ಕಾರ್ಣಿಕ ನೇಮಕ?

ಶುಕ್ರವಾರ, 14 ಡಿಸೆಂಬರ್ 2018 (17:02 IST)
ಮೈಲಾರ ಕ್ಷೇತ್ರದಲ್ಲಿ ಪ್ರತಿವರ್ಷ ಕಾರ್ಣಿಕ ಹೇಳುವ ಕಾರ್ಣಿಕರನ್ನು ಬದಲಾಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ಸುದ್ದಿಗೋಷ್ಠಿ ನಡೆಸಿದರು.

ಬಳ್ಳಾರಿ ಜಿಲ್ಲೆ ಮೈಲಾರ ಕ್ಷೇತ್ರದಲ್ಲಿ ಪ್ರತಿವರ್ಷವೂ ಕಾರ್ಣಿಕ ಹೇಳುವ ಕಾರ್ಣಿಕರನ್ನ ಬದಲಾಯಿಸಿದ ಹಿನ್ನೆಲೆಯಲ್ಲಿ ಗದಗನಲ್ಲಿ ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಸುದ್ದಿಗೋಷ್ಠಿ ನಡೆಸಿದರು. ಮೈಲಾರ ಕ್ಷೇತ್ರದ ಧರ್ಮಾಧಿಕಾರಿ ವೆಂಕಪ್ಪಯ್ಯ ಕಾರ್ಣಿಕರ ವಿಚಾರದಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದೂ ಮಂಜಪ್ಪ ಎಂಬೋರನ್ನ ಕಾರ್ಣಿಕರನ್ನಾಗಿ ನೇಮಿಸಿರುವುದು ಸಂಜಸವಲ್ಲ ಎಂದರು.

ಮಂಜಪ್ಪ ಎನ್ನುವವರು ಮದ್ಯವ್ಯಸನಿ ವ್ಯಕ್ತಿಯಾಗಿದ್ದು ಚಾರಿತ್ರ್ಯ ಹೀನರಾಗಿದ್ದಾರೆ. ಅಲ್ಲದೇ ಕಾರ್ಣಿಕಕ್ಕೂ ಮುನ್ನ ಯಾವ ವೃತವಿಧಾನಗಳನ್ನ ಮಾಡದ ಮಂಜಪ್ಪರನ್ನ ಶೀಘ್ರವೇ ಕಿತ್ತು ಹಾಕಿ ಈ ಹಿಂದಿನ ಕಾರ್ಣಿಕ ರಾಮಣ್ಣನವರನ್ನೇ ಮುಂದುವರೆಸಬೇಕು. ಇನ್ನೂ ಈ ವಿಚಾರದಲ್ಲಿ ಕಾಗಿನೆಲೆ ಪೀಠದ ನಿರಂಜಾನನಂದಪುರಿ ಸ್ವಾಮೀಜಿಗಳ ಹೆಸರು ಕೇಳಿ ಬರ್ತಾಯಿದ್ದರೂ ಅವರು ಇದರಲ್ಲಿ  ಹಸ್ತಕ್ಷೇಪ ಮಾಡಿಲ್ಲ. ಅಲ್ಲದೇ ಹಸ್ತಕ್ಷೇಪ ಮಾಡೊಲ್ಲ ಅಂತಾ ಈ ಹಿಂದೆ ಸ್ಪಷ್ಟ ಪಡಿಸಿದ್ದಾರೆ. ಅಲ್ಲಿ ಅವರ ಶಾಖಾಮಠದ ಕಟ್ಟಡ ಕಾಮಗಾರಿ ನಡೆಯುತ್ತಿದ್ದೂ ಆ ಭಾಗದ ಬಡಮಕ್ಕಳ ಶಿಕ್ಷಣ ಸೇವೆಯನ್ನ ಮಾಡಲಿದ್ದಾರೆ. ಹೀಗಾಗಿ ಒಂದೇ ವಾರದಲ್ಲಿ ಮೊದಲಿನ‌ ಕಾರ್ಣಿಕರನ್ನೇ ನೇಮಿಸಬೇಕು. ಇಲ್ಲವಾದ್ರೆ ಉಗ್ರ ಹೋರಾಟ ಮಾಡಲಾಗುವುದು ಅಂತಾ ಎಚ್ಚರಿಕೆ ನೀಡಿದರು.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ