ಮಹಿಳೆ ಲಿಂಗ ಬದಲಾಯಿಸಿಕೊಂಡು ಸ್ನೇಹಿತನೊಂದಿಗೆ ಇರಲು ಅನುಮತಿ ನೀಡಿದ ದೆಹಲಿ ಹೈಕೋರ್ಟ್

ಶನಿವಾರ, 17 ನವೆಂಬರ್ 2018 (07:11 IST)
ನವದೆಹಲಿ : ವೈವಾಹಿಕ ಜೀವನದಲ್ಲಿ ತೃಪ್ತಿ ಹೊಂದಿರದ ಯಾವುದೇ ಒಬ್ಬ ವಯಸ್ಕ ಮಹಿಳೆ, ಲಿಂಗ ಬದಲಾವಣೆ ಮಾಡಿಕೊಂಡು ತನ್ನ ಸ್ನೇಹಿತನೊಂದಿಗೆ ವಾಸಿಸಲು ಅವಕಾಶ ನೀಡುವುದಾಗಿ  ಗುರುವಾರ ದೆಹಲಿ ಹೈಕೋರ್ಟ್ ತಿಳಿಸಿದೆ.


ಮಹಿಳೆಯೊಬ್ಬಳು  ತಾನು ಪುರುಷನಾಗಿ ಗುರುತಿಸಿಕೊಳ್ಳಲು ಇಚ್ಚಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿದ್ದಾರ್ಥ್ ಮೃದುಲಾ ಹಾಗೂ ಸಂಗೀತಾ ಧಿಂಗ್ರಾ ಸೆಹಗಲ್ ಒಳಗೊಂಡ ಪೀಠವು ಆಕೆಗೆ ಲಿಂಗ ಬದಲಾವಣೆಗೆ ಅನುಮತಿ ನೀಡಿದಲ್ಲದೇ , ಈ ವಿಚಾರದ ಬಗ್ಗೆ ಆಕೆಯ ಪೋಷಕರು ಆಕೆಗೆ ವಿರೋಧ ವ್ಯಕ್ತಪಡಿಸುವ ಬದಲು ಆಕೆಯ ಇಚ್ಚೆಯಂತೆ ಬದುಕಲು ಅನುಮತಿ ನೀಡಬೇಕೆಂದು ಆಗ್ರಹಿಸಿದರು.


ಅಲ್ಲದೇ ಮಹಿಳೆಯರು  ಏನು ಮಾಡಬೇಕೆಂದು ಬಯಸುತ್ತಾರೊ ಅದರ  ಕುರಿತು ತೀರ್ಮಾನ ತೆಗೆದುಕೊಳ್ಳಲು ಅವರಿಗೆ  ಸ್ವಾತಂತ್ರ್ಯವಿದೆ. ಇದಕ್ಕೆ ನ್ಯಾಯಾಲಯವಾಗಲೀ, ಪೊಲೀಸರಾಗಲಿ ಮಧ್ಯ ಪ್ರವೇಶಿಸುವ ಅಗತ್ಯವಿಲ್ಲ. ಆಕೆಯ ಪೋಷಕರು ಹಾಗೂ ಆಕೆಯ ಪತಿ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದರೂ ಸಹ ಇದು ಕಾನೂನು ಬಾಹಿರವಲ್ಲ ಎಂಬುದಾಗಿ ಕೋರ್ಟ್ ಆದೇಶಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ