ಕಾವೇರಿ, ಮಹದಾಯಿ ಇಂಟರ್ ಸ್ಟೇಟ್ ವಿಚಾರವಾಗಿ ಆಲ್ ಪಾರ್ಟಿ ಮೀಟಿಂಗ್ ಕರೆಯಲಾಗಿದೆ- ಡಿಕೆಶಿ

ಭಾನುವಾರ, 20 ಆಗಸ್ಟ್ 2023 (14:22 IST)
ಆಯನೂರ ಮಂಜುನಾಥ್ ಭೇಟಿ ವಿಚಾರವಾಗಿ‌ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ಪ್ರತಿದಿನ ಯಾರ್ಯಾರೊ ಭೇಟಿ ಆಗ್ತಾಯಿರ್ತಾರೆ ಅವುಗಳನ್ನೇಲೆಲ್ಲ ಹೇಳೋಕೆ ಆಗುತ್ತಾ...?ಅವರವರ ಬದುಕು, ಅವರವರ ಭವಿಷ್ಯ ಅವರು ನೋಡಿಕೊಳ್ತಾರೆ.ಸಿಟಿ ರವಿ ಹಿರಿಯರಿದ್ದಾರೆ.ಅವರು ಥ್ರೆಟ್ ಕೊಡ್ತಿದ್ದಾರೆ.ಕೈಕತ್ತರಿಸ್ತೇವೆ ಅಂತ.ನೀವು ಮಾಡಿದಾಗ ಏನಾಗಿತ್ತು.ಜೆಡಿಎಸ್‌, ಕಾಂಗ್ರೆಸ್ ಶಾಸಕರ ಕರ್ಕೊಂಡ್ ಮಜಾ ಮಾಡಿದ್ರಲ್ಲ.ಅವರ ರಾಜಕಾರಣ ಅವರು ಮಾಡಲಿ.ನಿಮಗೆ ಬರೋ ಥ್ರೆಟ್ ತರ ಅವರಿಗೂ ಬರುತ್ತೆ.ನಾವು ಯಾರನ್ನೂ ಕರೀತಿಲ್ಲ.ನಮಗಿರೋ ನಂಬರ್ ಗೆ ಯಾರೂ ಅವಶ್ಯಕತೆ ಇಲ್ಲ.ದೇಶದ ಉದ್ದಗಲಕ್ಕೂ ಭಾರತ ಉಳಿಸಲು ಒಗ್ಗೂಡಿದ್ದಾರೆ.ಜನ ಬರೋರನ್ನ ನಾನು ತಡೆಯೋಕಾಗಲ್ಲ.ಕೋಳಿ ಕೇಳಿ ಮಸಾಲ ಅರೆಯೋಕಾಗುತ್ತಾ ಎಂದು ಸಿಟಿ ರವಿ ಹೇಳಿಕೆಗೆ ಡಿ ಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.
 
ಬುಧವಾರ ಕಾವೇರಿ, ಮಹದಾಯಿ ಇಂಟರ್ ಸ್ಟೇಟ್ ವಿಚಾರವಾಗಿ ಆಲ್ ಪಾರ್ಟಿ ಮೀಟಿಂಗ್ ಕರೆಯಲಾಗಿದೆ.ಎಂಪಿಗಳು ಬರ್ತಾರೆ.ಬುಧವಾರ ವಿಧಾನಸೌಧದಲ್ಲಿ 11ಗಂಟೆಗೆ ಸಿಎಂ ಡೇಟ್ ನಿಗದಿ ಮಾಡಿದ್ದಾರೆ.ನಾವು ಅನೇಕ ವಿಚಾರ ಚರ್ಚೆ ಮಾಡ್ತೀವಿ.ಈಗಾಗಲೇ ಬರೆದಿದ್ದೇವೆ ರೀಬಡಿಶಿಷನ್ ಮಾಡಲು‌ ಅಪೀಲ್ ಹಾಕಲು ಆದೇಶ ಮಾಡಿದ್ದೇವೆ.ಲೀಗಲ್ ವಿಚಾರ ಅಡ್ವೋಕೇಟ್ಗೆ ಬಿಟ್ಟಿದ್ದೇವೆ.ಒಳ ಹರಿವು ಕಡಿಮೆ ಆಗಿದೆ.ಕೃಷ್ಣಾ ತುಂಬಿದ್ರೂ ಕೂಡ, ಇನ್ ಫ್ಲೋ ಕಡಿಮೆ ಆಗಿದೆ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ