ತಮಿಳುನಾಡಿಗೆ ಕಾವೇರಿ ನೀರು ಹರಿಸುವುದಕ್ಕೆ ವಿರೋಧ

ಶುಕ್ರವಾರ, 18 ಆಗಸ್ಟ್ 2023 (19:25 IST)
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದಕ್ಕೆ ವಿರೋಧ ಪಕ್ಷಗಳಿಂದ ಹಿಡಿದು ಸ್ವಪಕ್ಷದ ಶಾಸಕರು ಸರ್ಕಾರದ ನಿರ್ಧಾರಕ್ಕೆ ವಿರೋಧ ಪಡಿಸಿದ್ದಾರೆ. ಆದರೆ ಸರ್ಕಾರ ಮಾತ್ರಾ ತಮಿಳುನಾಡಿಗೆ ನೀರು ಹರಿಸುವುದನ್ನ ನಿಲ್ಲಿಸಿಲ್ಲ ಯಾಕೆ ನಿಲ್ಲಿಸಿಲ್ಲ ಸರ್ಕಾರ ಏನ್ ಪ್ರಯತ್ನ ನಡೆಸುತ್ತಿದೆ.ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿನಿತ್ಯ 10 ಸಾವಿರ ಕ್ಯೂಸೆಕ್ ನೀರು ಹರಿಸುತ್ತಿದ್ದಾರೆ.ರಾಜ್ಯದಲ್ಲಿ ಮಳೆ ಅಭಾವ ಆಗಿದೆ ಮಂಡ್ಯ ಭಾಗದಲ್ಲಿ ರೈತರು ಬಿತ್ತನೆ ಮಾಡಿಲ್ಲ.ಇನ್ನೂ ಕೆ ಆರ್ ಎಸ್ ಡ್ಯಾಂ ನಲ್ಲಿಯು ನೀರು ಕಡಿಮೆ ಇದೆ ಈ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಎಷ್ಟು ಸರಿ ಎಂದು ರೈತರು,ಆಡಳಿತ ಪಕ್ಷದ ಶಾಸಕರು,ವಿಪಕ್ಷನಾಯಕರು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ.ಸರ್ಕಾರ ರಾಜ್ಯದ ಪರಿಸ್ಥಿತಿ ಕೋರ್ಟ್ ಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ ನೀರಾವರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಸಚಿವ ಎಂ ಪಿ ಪಾಟೀಲ್ ಮಾತನಾಡಿ ಕಾವೇರಿ ನೀರಿನ ವಿಚಾರದಲ್ಲಿ ಈಗಾಗಲೇ ನೀರಾವರಿ ಸಚಿವರು ಡಿಸಿಎಂ ಸಂಬಂಧಿಸಿದ ಖಾತೆ ಸಚಿವರು ಹೇಳಿಕೆ ನೀಡಿದ್ದಾರೆ.ನಾನೂ ಕೂಡ ಹಿಂದೆ ಸಚಿವ ಆಗಿದ್ದೆ. ನೀರಿನ ಹಂಚಿಕೆ ಸಾಮಾನ್ಯ ಸಮಯದಲ್ಲಿ 170 TMC ಕೊಡಬೇಕು.ಈಗ ಸಂಕಷ್ಟ ವರ್ಷ. ಈಗ ಡಿಸ್ಟೆನ್ಸ್ ಕೂಡ ನೋಡಬೇಕು.ಎಷ್ಟು ಮಳೆಯಾಗಿದೆ ಅಂತ ನೋಡಿ ನೀರು ಬಿಡಬೇಕು.CWC ನೀರು ಬಿಡುವ ನಿರ್ಧಾರ ಮಾಡಿದೆ.ನಮ್ಮ ಸರ್ಕಾರ ಕೂಡ ಅಪೀಲ್ ಮಾಡಿದೆ.ನಾನು ಕೂಡ ನೀರಾವರಿ ಸಚಿವರು ಅಧಿಕಾರಿಗಳಿಗೆ ಮಾತಾಡ್ತೀನಿ.ತಮಿಳುನಾಡಿನಲ್ಲಿ ನೀರು ಎಷ್ಟಿದೆ ಅಂತ ನೋಡಬೇಕು.ಅಲ್ಲಿರೋ ನೀರನ್ನೂ ಪರಿಗಣಿಸಬೇಕು.ಅದನ್ನ CWC ಮುಂದೆ ಹೇಳಬಹುದು.ಸಂಕಷ್ಟದ ಸೂತ್ರ ಮಾಡಬಹುದು.ಈ ತರ ಅನೇಕಬಾರಿ ಆಗಿದೆ. ಇದೆಲ್ಲಾ ಗಮನದಲ್ಲಿಟ್ಟುಕೊಂಡು ನಮ್ಮ ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ನಾವು ಈ ಕೆಲಸ ಮಾಡುತ್ತೇವೆ. ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ