75 ನೇ ಸ್ವಾತಂತ್ರ್ಯ ದಿನಾಚರಣೆಗೆ ಈದ್ಗಾಮೈದಾನದಲ್ಲಿ ಸಕಲ ಸಿದ್ಧತೆ
ಸ್ವಾತಂತ್ರ್ಯ ದಿನಾಚರಣೆಗೆ ಚಾಮರಾಜಪೇಟೆ ಈದ್ಗಾ ಮೈದಾನ ಸಜ್ಜಾಗುತ್ತಿದೆ.ನಾಳೆ ನಡೆಯಲಿರುವ ಧ್ವಜಾರೋಹಣಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.ಈದ್ಗಾ ಮೈದಾನದ ಸುತ್ತ ಬ್ಯಾರಿ ಕೇಡ್ ಅಳವಡಿಕೆ ಮಾಡಲಾಗಿದೆ.ಈ ಬಾರಿ ಸರ್ಕಾರ ವತಿಯಿಂದ ಮೊದಲ ಬಾರಿಗೆ ಧ್ವಜಾರೋಹಣ ನಡೆಯಲ್ಲಿದ್ದು,75 ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವಕ್ಕೆ ಈದ್ಗಾ ಮೈದಾನ ಸಜ್ಜಾಗಿದೆ.ಈದ್ಗಾ ಮೈದಾನದ ಸುತ್ತಲೂ ತ್ರಿವರ್ಣ ಧ್ವಜ ಹಾರಿಸುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿಬಂದೋಬಸ್ತ್ ಮಾಡಲಾಗಿದೆ.