ಚಾಮರಾಜಪೇಟೆಯಲ್ಲಿ ನಾಗರೀಕ ಒಕ್ಕೂಟದವರು ಮತ್ತು ಪೊಲೀಸವರ ನಡುವೆ ವಾಗ್ವಾದ

ಭಾನುವಾರ, 14 ಆಗಸ್ಟ್ 2022 (16:15 IST)
ಚಾಮರಾಜಪೇಟೆ ನಾಗರೀಕ ಒಕ್ಕೂಟದವರು ಸರ್ವರಿಗೂ 75 ನೇ ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ಕೋರಿ ಗ್ರೌಂಡ್ ಹೊರಗಿನ ಲೈಟ್ ಕಂಬಕ್ಕೆ ಫ್ಲೆಕ್ಸ್ ನ್ನ  ಕಟ್ಟುತ್ತಿದ್ದರು.ಈ ನಡುವೆ ಪೊಲೀಸರು ಮಧ್ಯ ಪ್ರವೇಶಿಸಿದಾರೆ.ಫ್ಲೆಕ್ಸ್ ಗಳನ್ನ ತೆರವುಗೊಳಿಸುವಂತೆ ನಾಗರೀಕರಿಗೆ ತಾಕೀತು ಮಾಡಿದ್ದಾರೆ‌.ನೀವು ಹಾಕಿದ್ರೆ ಮತ್ತೊಬ್ಬರು ಹಾಕ್ತೀವಿ ಅಂತಾ ಬರ್ತಾರೆ .ಇದು ಸರ್ಕಾರಿ ಕಾರ್ಯಕ್ರಮ ಫ್ಲೆಕ್ಸ್ ತೆರವುಗೊಳಿಸಿ ಅಂತಾ ಪೊಲೀಸ್ ನವರು ಸೂಚನೆ ನೀಡಿದ್ದಾರೆ.ಹೀಗಾಗಿ ನಾಗರೀಕ ಒಕ್ಕೂಟದವರು ಪೊಲೀಸ್ ನವರ ವಿರುದ್ಧ ಆಕ್ರೋಶಗೊಂಡಿದ್ದಾರೆ.
 
 ನಾವು ಇನ್ನೆಲ್ಲಿ ಬೋರ್ಡ್ ಕಟ್ಟಬೇಕು.ಗೌರ್ನಮೆಂಟ್ ಗೆ ಮೈದಾನ ಬಗ್ಗೆ ತಿಳಿಸಿದ್ದೇ ನಾವು.೧೦೮ ಸಂಘಟನೆಗಳು ಸೇರಿ ಒಕ್ಕೂಟ ಮಾಡಲಾಗಿದೆ .ಸರ್ಕಾರದ ಗಮನ ಸೆಳೆದಿದ್ದೇ ನಮ್ಮ ಒಕ್ಕೂಟ .ನಮಗೆ ಫ್ಲೆಕ್ಸ್ ಹಾಕಲು ಬಿಡಲ್ಲ ಅಂದ್ರೆ ಹೇಗೆ ಅಂತಾ ಚಾಮರಾಜಪೇಟೆ ನಾಗರೀಕ ಒಕ್ಕೂಟದವರು ಪೊಲೀಸ್ ನವರಿಗೆ ಪ್ರಶ್ನೆ ಮಾಡಿದ್ದಾರೆ.ಅಷ್ಟೇ ಅಲ್ಲದೆ ಪೊಲೀಸರ ವಿರುದ್ಧ ವ್ಯಾಪಕ ಅಸಾಮಾಧಾನಗೊಂಡಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ