ಮಡಿಕೇರಿ ಅ.30 : ಕುಂದಚೇರಿ ಗ್ರಾ.ಪಂ ನೂತನ ಕಟ್ಟಡವನ್ನು ನಿರ್ಮಿಸಲು ಯೋಜನೆ ರೂಪಿಸಿದ್ದು, ಇದಕ್ಕೆ ಗ್ರಾಮಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ಆದರೆ ಕೆಲವರು ರಾಜಕೀಯ ದುರುದ್ದೇಶದಿಂದ ಕಟ್ಟಡ ನಿರ್ಮಾಣದ ಕುರಿತು ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ಗ್ರಾ.ಪಂ ಅಧ್ಯಕ್ಷೆ ಸಿ.ಯು.ಸವಿತ ಹಾಗೂ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಮಾರು 42 ವರ್ಷಗಳ ಹಿಂದಿನ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ, ನೂತನ ಕಟ್ಟಡ ನಿರ್ಮಾಣಕ್ಕೆ ವಿವಿಧ ಹಣಕಾಸು ಕ್ರಿಯಾ ಯೋಜನೆಡಿ 34.62 ಲಕ್ಷ ರೂ. ಈಗ ಕಟ್ಟಡ ಕಾಮಗಾರಿಗೆ ಸಂಬೋಧಿಸಿದ ಹಲವು ಇಲಾಖೆಗಳ ಅನುಮತಿ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಂದಾಜು ಪಟ್ಟಿಯನ್ನು ಕೂಡ ತಯಾರಿಸಲಾಗಿದೆ, ಕಟ್ಟಡ ನಿರ್ಮಾಣ ಕಾರ್ಯ ಕಾನೂನುಬದ್ಧವಾಗಿ ಸರಿಯಾಗಿದೆ ಎಂದು ಸ್ಪಷ್ಟಪಡಿಸಿದರು. ರಾಜಕೀಯ ದುರುದ್ದೇಶದ ಹೇಳಿಕೆಗಳನ್ನು ಬಿಟ್ಟು ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಕೆ.ವಿ.ಪ್ರವೀಣ್ ಕುಮಾರ್ (ವಿಶು), ಸದಸ್ಯರುಗಳಾದ ಕೆ.ಯು.ಹ್ಯಾರಿಸ್, ಪಿ.ಬಿ.ದಿನೇಶ್ ಹಾಗೂ ಬೇಬಿ ಪೊನ್ನಪ್ಪ.