ಬಿಡಿಎ ಅಧಿಕಾರಿಗಳ ಜೊತೆ ಡಿಸಿಎಂ ಡಿ.ಕೆ. ಶಿವಕುಮಾರ್ ಮೊದಲ ಸಭೆ

ಸೋಮವಾರ, 29 ಮೇ 2023 (21:50 IST)
ಪ್ರಗತಿ ಪರಿಶೀಲನಾ ಸಭೆಯನ್ನ ಡಿಕೆ ಶಿವಕುಮಾರ್ ನಡೆಸಿದ್ದಾರೆ.ಸಭೆಯಲ್ಲಿ ಬಿಡಿಎ ಕಮಿಷನರ್ ಕುಮಾರ್ ನಾಯಕ್, EM ಶಾಂತರಾಜಣ್ಣ, TPM ಧನಂಜಯ್ ರೆಡ್ಡಿ, ಡೆಪ್ಯುಟಿ ಸೆಕ್ರೆಟರಿ ಶಾಂತ್ ರಾಜ್, ಡೆಪ್ಯುಟಿ ಕಮಿಷನರ್ ಸೌಜನ್ಯ, ಆರ್ಥಿಕ ಸಲಹೆಗಾರ ಲೋಕೇಶ್, ಭೂಸ್ವಾಧೀನಾಧಿಕಾರಿಗಳು ಸೇರಿ ಎಲ್ಲಾ ವಿಭಾಗದ ಅಧಿಕಾರಿಗಳು ಭಾಗಿಯಾಗಿದ್ದಾರೆ.
ಸಭೆಯಲ್ಲಿ ಅಧಿಕಾರಿಗಳ ಹೆಸರು, ಡೆಸಿಗ್ನೇಶನ್, ಎಷ್ಟು ವರ್ಷ ದಿಂದ ಕೆಲಸ ಮಾಡ್ತಿರುವ ಬಗ್ಗೆ ಮಾಹಿತಿಯನ್ನ ಡಿಕೆಶಿವಕುಮಾರ್ ಪಡೆದಿದ್ದಾರೆ.ಡಿಕೆಶಿಗೆ ನಗರಾಭಿವೃದ್ಧಿ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕಮಿಷನರ್ ಕುಮಾರ್ ನಾಯಕ್ ರಿಂದ ಮಾಹಿತಿ  ನೀಡಲಾಗಿದೆ. 
 
ಎಲ್ಲಾ ಲೇಔಟ್ ಗಳ ಪ್ರಗತಿಯನ್ನ ಭೂಸ್ವಾಧೀನಾಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ.ಪವರ್ ಪ್ರೆಸೆಂಟೇಶನ್ ಮೂಲಕ ವಿವರಣೆಯನ್ನ  ಅಧಿಕಾರಿಗಳು ನೀಡ್ತಿದ್ದಾರೆ.ನೂತನವಾಗಿ ಅಭಿವೃದ್ಧಿಪಡಿಸಲಾಗ್ತಿರುವ ಶಿವರಾಮಕಾರಂತ ಲೇಔಟ್ ಬಗ್ಗೆ,ವಾರ್ಡ್, ಅಂತಿಮ ಅಧಿಸೂಚನೆ, ಪರಿಹಾರದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಾಹಿತಿ ಪಡೆದಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ