ಸಾವರ್ಕರ್‌ ಜೊತೆ ಗಾಂಧೀಜಿ ಫೋಟೋ ಕೂಡ ತೆಗೆಯಿರಿ – ಚೇತನ್‌

ಶುಕ್ರವಾರ, 8 ಡಿಸೆಂಬರ್ 2023 (14:42 IST)
ಬೆಳಗಾವಿಯ ಸುವರ್ಣಸೌಧದಲ್ಲಿ ವಿ.ಡಿ. ಸಾವರ್ಕರ್‌ ಜೊತೆಗೆ ಮಹಾತ್ಮಾ ಗಾಂಧೀಜಿ ಫೋಟೋ ಕೂಡ ತೆರವು ಮಾಡಬೇಕು ಎಂದು ಹೇಳಿಕೆ ನೀಡುವ ಮೂಲಕ ನಟ ಚೇತನ್‌ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ನಟ ಚೇತನ್ ಅಹಿಂಸಾ, ಸಾವರ್ಕರ್ ಹಾಗೂ ಗಾಂಧಿ ಇಬ್ಬರ ಫೋಟೋಗಳನ್ನು ತೆಗೆಯಬೇಕು ಎಂದಿದ್ದಾರೆ.
 
ಸುವರ್ಣ ಸೌಧದಿಂದ ಸಾವರ್ಕರ್ ಫೋಟೋ ತೆಗೆದರೆ ಸೂಕ್ತ. ಅದನ್ನು ನನಗೆ ಬಿಟ್ಟರೆ ಇವತ್ತೇ ತೆಗೆಯುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳುತ್ತಾರೆ,  ಕಾಂಗ್ರೆಸ್ ಮತ್ತು ಖರ್ಗೆಯವರಿಗೆ ಸಾವರ್ಕರ್ ಸೈದ್ಧಾಂತಿಕ ಶತ್ರುವಾಗಿರಬಹುದು. ಆದರೆ  ನಮ್ಮಂತಹ ಸಮಾನತಾವಾದಿಗಳಿಗೆ, ಸಾವರ್ಕರ್ ಮತ್ತು ಗಾಂಧಿ ಇಬ್ಬರೂ  ಸೈದ್ಧಾಂತಿಕ ಶತ್ರುಗಳು.  ನೀವು ಸಾವರ್ಕರ್ ಮತ್ತು ಗಾಂಧಿ ಇಬ್ಬರ ಫೋಟೋಗಳನ್ನು ತೆಗೆದುಹಾಕುವುದು ಸೂಕ್ತ ಎಂದು ಚೇತನ್‌ ಅಹಿಂಸಾ ಜೇನುಗೂಡಿಗೆ ಕಲ್ಲೆಸೆದಿದ್ದಾರೆ. ಒಂದು ವೇಳೆ ಸಾವರ್ಕರ್‌ ಫೋಟೋ ತೆಗೆಯಲು ಆಗದಿದ್ದರೆ.   ಇಬ್ಬರನ್ನೂ ಇಟ್ಟುಕೊಳ್ಳಿ . ಅವರ ಜೊತೆಗೆ  ಸುವರ್ಣ ಸೌಧದಲ್ಲಿ ಕನ್ನಡಿಗ ತಂದೆ ಪೆರಿಯಾರ್ ಅವರ ಭಾವಚಿತ್ರವನ್ನು ಸೇರಿಸಿ ಎಂದು ಚೇತನ್‌ ಅಹಿಂಸಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ