ಅಕ್ಟೋಬರ್ 2 ಮಹಾತ್ಮ ಗಾಂಧೀಜಿಯವರ ಜನ್ಮ ದಿನದಂದು ಇಡೀ ಮಾನವ ಕುಲಕ್ಕೆ ನೀಡಿದ ಕೊಡಗೆಗಳ ಸ್ಮರಣೆ ಮಾಡಲೇಬೇಕು. ಈ ದಿನವನ್ನ ಇಡೀ ವಿಶ್ವವೇ ಶಾಂತಿ ದಿನವೆಂದು ಆಚರಣೆ ಮಾಡುತ್ತದೆ. ಅವರ ಸತ್ಯ ಮತ್ತು ಅಹಿಂಸೆಯ ಮಾರ್ಗಗಳು ಜಗತ್ತಿನ ಅನೇಕ ನಾಯಕರುಗಳನ್ನು ಮಹಾತ್ಮರ ವ್ಯಕ್ತಿತ್ವಕ್ಕೆ ಪ್ರಭಾವಿತಗೊಳಿಸಿದ್ದವು.ಪ್ರಮುಖವಾಗಿ ನೆಲ್ಸೇಲ್ ಮಂಡೇಲಾ, ಮೋಟಿನ್ ಲೆಥರ ಗಾಂಧೀಜಿಯವರ ಸತ್ಯಾಗ್ರಹ ಸ್ವಾತಂತ್ರ್ಯ ಮತ್ತು ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಭದ್ಧರಾಗಿದ್ದರು.ಗ್ರಾಮೀಣ ಸರ್ವಾಂಗಿನ ಅಭಿವೃದ್ಧಿ ಇಂದಾಗಿ ದೇಶದ ಅಭಿವೃದ್ಧಿವಾಗಲಿದೆ ಎಂಬ ದೃಢವಾದ ನಂಬಿಕೆ ಅವರದಾಗಿತ್ತು. ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಮಹಾತ್ಮ ಗಾಂಧೀಜಿ ಶತಕಗಳ ಹಿಂದೆಯೇ ಯೋಚನೆ ಮಾಡಿದ್ದರು.
ಈ ಅಧಿವೇಶನಕ್ಕೆ ಈಗ ಒಂದು ನೂರು ವರ್ಷಗಳು ತುಂಬುತ್ತಿವೆ. ಬೆಳಗಾವಿ ಹಾಗೂ ಕರ್ನಾಟಕದ ಜನತೆಯ ಹೆಮ್ಮೆಯ ವಿಷಯವಾಗಿದೆ.1918ರಲ್ಲಿ ಬಿಹಾರ್ ಮತ್ತು ಚಂಪಾರನ್ ಚಳುವಳಿ, ಅಸಹಕಾರ ಚಳುವಳಿ, ನಾಗರಿಕ ಅಸಹಕಾರ ಚಳುವಳಿ, ಸ್ವರಾಜ್ ಮತ್ತು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಗಾಂಧೀಜಿ ವಹಿಸಿದ ಪ್ರಮುಖ ಸ್ವಾತಂತ್ರ್ಯ ಚಳುವಳಿಗಳಾಗಿದ್ದವು.ಗಾಂಧೀಜಿಯವರು ಭಾರತ ಸ್ವತಂತ್ರ ಸಂಗ್ರಾಮದಲ್ಲಿ ಅವರ ನೇತೃತ್ವ ಎಷ್ಟು ಪ್ರಮುಖವಾಗಿತ್ತು ಎಂದರೆ ಜಗತ್ತೇ ಅವರ ಕಡೆ ನೋಡುವಂತಾಗಿತ್ತು. ಬ್ರಿಟಿಷರು ಅರೆ ಬತ್ತಲೆ ಪಕೀರ ನಮ್ಮನ್ನು ಏನು ಮಾಡಬಲ್ಲ ಎಂಬ ಭ್ರಮೆಯಲ್ಲಿ ಈಸ್ಟ್ ಇಂಡಿಯಾ ಕಂಪನಿ ಅಪಹಾಸ್ಯ ಮಾಡುತ್ತಿತ್ತು. ಆದರೆ ಮಹಾತ್ಮ ಗಾಂಧಿ ಸತ್ಯ ಮತ್ತು ಅಹಿಂಸ ಚಳುವಳಿಗಳಿಂದ ಸೂರ್ಯ ಮುಳುಗಲಾರದ ಸಾಮ್ರಾಜ್ಯವನ್ನು ಯಾವುದೇ ಅಸ್ತ್ರ ಶಸ್ತ್ರ ಗಳಿಲ್ಲದೆ ಕೊನೆಗೊಳಿಸಿದರು ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ಗಡಿನಾಡಿನ ಗಾಂಧಿ ಅಬ್ದುಲ್ ಗಫಾರ್ ಖಾನ್ ಪಂಡಿತ್ ಜವಾಹರ್ಲಾಲ್ ನೆಹರು ಸರ್ದಾರ್ ವಲ್ಲಭ ಪಟೇಲ್ ಮೌಲಾನ ಅಜಾದ್ ಸರೋಜಿನಿ ನಾಯ್ಡು ಅನೇಕ ಅನೇಕ ಸ್ವತಂತ್ರ ಸೇನಾನಿಗಳು ಅವರ ನೇತೃತ್ವದಲ್ಲಿ ಸ್ವತಂತ್ರ ಸಂಗ್ರಾಮಕ್ಕೆ ಧುಮಿಕಿದರು.
ಆ ಕರಾಳ ದಿನಗಳಲ್ಲಿ ಅದೆಂತ ಧೈರ್ಯ ಬಾಪೂಜಿಯವರಾಗಿತ್ತೆಂದರೆ ನಂಬಿದ ಸಿದ್ಧಾಂತಗಳನ್ನು ಅಂತಹ ಕಠೋರ ವ್ಯಕ್ತಿಗಳು ಕೂಡ ಮನ್ನಣೆ ನೀಡುತ್ತಾರೆ ಎಂಬುದೇ ಆ ಕ್ಷಣಗಳಲ್ಲಿ ಸಾಕ್ಷಿ ಉಪವಾಸ ಸತ್ಯಾಗ್ರಹದಿಂದ ಕೋಮ ದಂಗೆಗಳನ್ನು ನಿಲ್ಲಿಸಿದ ಹೆಗ್ಗಳಿಕೆ ಮಹಾತ್ಮ ಗಾಂಧೀಜಿಯವರದಾಗಿತ್ತು. ಮಹಾತ್ಮ ಗಾಂಧೀಜಿಯವರನ್ನು 1948 ಜನವರಿ 30ರಂದು ನಾಥೂರಾಮ್ ಗೋಡ್ಸೆ ಗಾಂಧೀಜಿಯವರ ಎದೆಗೆ ಮೂರು ಗುಂಡುಗಳನ್ನು ಹಾರಿಸಿದ ಆದರೆ ಈ ಜಗತ್ತು ಆ ಮೂರು ಗುಂಡುಗಳನ್ನು ಮೂರು ಪದಕಗಳೆಂದು ಮಾರ್ಮಿಕವಾಗಿ ಹೇಳಿತು. ಅವರ ಸರಳತೆ, ದೇಶಕ್ಕಾಗಿ ಸಮರ್ಪಣೆ ಮತ್ತು ಜೈ ಜವಾನ್, ಜೈ ಕಿಸಾನ್ ಎಂಬ ಸಾಂಪ್ರದಾಯಿಕ ಕರೆ ಇಂದಿಗೂ ಪ್ರತಿಧ್ವನಿಸುತ್ತದೆ, ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ.