ವರದಕ್ಷಿಣೆ ಅನಿಷ್ಟ ಜನರು ತಮ್ಮೊಳಗೆ ಬದಲಾಗಬೇಕು: ಸುಪ್ರೀಂಕೋರ್ಟ್

ಬುಧವಾರ, 8 ಡಿಸೆಂಬರ್ 2021 (20:18 IST)
ವರದಕ್ಷಿಣೆ ಎಂಬ ಸಾಮಾಜಿಕ ಅನಿಷ್ಟವನ್ನು ಕೊನೆಗೊಳಿಸಲು ಕಾನೂನುಗಳು ಮುಖ್ಯವಾಗಿದ್ದರೂ, ಜನರು ಸಹ ಒಳಗಿನಿಂದ ಬದಲಾಗಬೇಕು ಮತ್ತು ಮಹಿಳೆಯರನ್ನು ಗೌರವದಿಂದ ನಡೆಸಿಕೊಳ್ಳುವುದನ್ನು ಕಲಿಯಬೇಕು ಎಂದು ಅರ್ಜಿ ಡಿಸೆಂಬರ್ 6 ರಂದು ಹೇಳಿದೆ.
ಭಾರತೀಯ ದಂಡ ಸಂಹಿತೆಯಲ್ಲಿ ಹಲವಾರು ಕ್ರಿಮಿನಲ್ ಕಾನೂನು ನಿಬಂಧನೆಗಳ ಹೊರತಾಗಿಯೂ ವರದಕ್ಷಿಣೆ ಬೆದರಿಕೆಗಳು ಮುಂದುವರೆದಿದೆ. ಹೀಗಾಗಿ ಮಾಹಿತಿ ಹಕ್ಕು (ಆರ್‌ಟಿಐ) ಅಧಿಕಾರಿಗೆ ಸಮಾನವಾದ ವರದಕ್ಷಿಣೆ ನಿಷೇಧ ಅಧಿಕಾರಿಯನ್ನು ನೇಮಿಸಲು ನಿರ್ದೇಶನಗಳನ್ನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ನಡೆಸಿದೆ.
“ಕೇರಳದ ಪರಿಸ್ಥಿತಿಯಿಂದ ನಾನು ವಿಚಲಿತನಾಗಿದ್ದೇನೆ. ಆಯುರ್ವೇದ ವಿದ್ಯಾರ್ಥಿನಿ ವರದಕ್ಷಿಣೆ ಪ್ರಕರಣದಲ್ಲಿ ಕ್ರಮ ಕೈಗೊಳ್ಳದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಕೇರಳದಲ್ಲಿ ಇದೊಂದು ಅನಿಷ್ಟ ಪದ್ಧತಿಯಾಗಿದೆ. ಅತಿಯಾದ ಚಿನ್ನ ಮತ್ತು ಇತರ ವಸ್ತುಗಳಿಗೆ ಬೇಡಿಕೆ ಇಡಲಾಗುತ್ತಿದೆ” ಎಂದು ಕೇರಳದ ಅರ್ಜಿದಾರರ ಪರ ಹಾಜರಾಗಿದ್ದ ವಕೀಲ ವಿ.ಕೆ.ಬಿಜು ಸುಪ್ರೀಂಕೋರ್ಟ್‌ ಪೀಠಕ್ಕೆ ಹೇಳಿದ್ದಾರೆ.
1930 ಕ್ಕೆ ಹೋಲಿಸಿದರೆ ಈಗ ವರದಕ್ಷಿಣೆ 90% ಹೆಚ್ಚಳವಾಗಿದೆ: ಕಾರಣವೇನು..?
ಆಯುರ್ವೇದ ಅಧ್ಯಯನ ಮಾಡುತ್ತಿದ್ದ 24 ವರ್ಷದ ವಿಸ್ಮಯಾ ಎಂಬ ವೈದ್ಯಕೀಯ ವಿದ್ಯಾರ್ಥಿನಿ ಕೇರಳದ ಸಾಸ್ತಮಕೋಟ್ಟಾದಲ್ಲಿನ ತನ್ನ ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆಕೆಯ ಸಾವನ್ನಪ್ಪಿದ ಒಂದು ದಿನದ ಬಳಿಕ, ವರದಕ್ಷಿಣೆ ಕಿರುಕುಳ ಆರೋಪದಲ್ಲಿ ಪೊಲೀಸರು ಆಕೆಯ ಪತಿಯನ್ನು ಬಂಧಿಸಿದ್ದರು.
ದಂಪತಿಗಳಿಗೆ ವರದಕ್ಷಿಣೆಯ ವಿರುದ್ಧ ಎಚ್ಚರಿಕೆ ನೀಡಲು ಮತ್ತು ಜಾಗೃತಿ ಮೂಡಿಸಲು ಕಡ್ಡಾಯ “ವಿವಾಹಪೂರ್ವ” ಕೋರ್ಸ್‌ಗಳನ್ನು ನಡೆಸಬೇಖು. ಮದುವೆಗೆ ಈ ಕೋರ್ಸ್‌ಗಳನ್ನು ಕಡ್ಡಾಯ ಪೂರ್ವ-ಷರತ್ತಾಗಿ ಮಾಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿದಾರರು ಮನವಿ ಮಾಡಿದ್ದಾರೆ.
ಕಟ್ಟುನಿಟ್ಟಿನ ಕಾನೂನುಗಳ ಹೊರತಾಗಿಯೂ, ವರದಕ್ಷಿಣೆ ಸಮಾಜವನ್ನು ಹಾಳುಮಾಡುತ್ತದೆ. ಇದರಿಂದ ಅಮಾಯಕ ಯುವತಿಯರ ಜೀವ ಹೋಗುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.
“ಕಾನೂನುಗಳು ಮುಖ್ಯ, ಆದರೆ ಬದಲಾವಣೆಯು ಜನರ ಒಳಗಿನಿಂದ ಬರಬೇಕು. ಮದುವೆಯ ಮೂಲಭೂತ ಸಾಮಾಜಿಕ ಮೌಲ್ಯದ ಬಗ್ಗೆ ತಿಳುವಳಿಕೆ ಇರಬೇಕು. ಒಂದು ಕುಟುಂಬಕ್ಕೆ ಬರುವ ಮಹಿಳೆಯನ್ನು ನಾವು ಹೇಗೆ ನಡೆಸಿಕೊಳ್ಳುತ್ತೇವೆ ಮತ್ತು ಮಹಿಳೆಯ ಸಾಮಾಜಿಕ ಪ್ರಾಮುಖ್ಯತೆಯನ್ನು ಹೇಗೆ ಪರಿಗಣಿಸುತ್ತೇವೆ ಎಂಬುದು ಕೂಡ ಮುಖ್ಯ” ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ.
ವರದಕ್ಷಿಣೆ ವಿರುದ್ಧದ ಕಾನೂನಿಗೆಹೊಸ ನೋಟ" ತಂದು ಕಾನೂನು ರಚನೆಗಳು ಭಾರತದ ಕಾನೂನು ಆಯೋಗಕ್ಕೆ ಪ್ರಸ್ತುತಪಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ