ಅಮರನಾಥ ಯಾತ್ರಿಕರಿಗೆ ತೀವ್ರ ನಿರಾಸೆ: ದರ್ಶನ ಪಡೆಯದೇ ವಾಪಸ್ ಆಗುತ್ತಿರುವ ರಾಜ್ಯದ ಯಾತ್ರಿಕರು

ಶನಿವಾರ, 7 ಜುಲೈ 2018 (18:16 IST)
ಕಾಶ್ಮೀರ ಕಣಿವೆಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಅಮರನಾಥ ಯಾತ್ರೆ ಸ್ಥಗೀತಗೊಂಡ ಪರಿಣಾಮ ಯಾದಗಿರಿ ಜಿಲ್ಲೆಯ ಶಹಾಪುರದಿಂದ ತೆರಳಿದ 7 ಯಾತ್ರಿಕರು ಎರಡು ದಿನಗಳ ಕಾಲ ಸಂಕಷ್ಟ ಎದುರಿಸಿದ್ದು, ಕೊನೆಗು ದೇವರ ದರ್ಶನ ಪಡೆಯದೆ ವಾಪಸ್ ಬರುತ್ತಿದ್ದಾರೆ.

ಇದೆ 3 ರಂದು ಶಹಾಪುರದಿಂದ ತೆರಳಿದ ಶಿವಕುಮಾರ, ಶಿವರಾಜ, ಪ್ರಕಾಶ್, ರಾಘವೇಂದ್ರ, ಬಸವರಾಜ, ಮೌನೇಶ ಹಾಗೂ ರವಿಕುಮಾರ ಅವರು ದೇಹಲಿಗೆ ತೆರಳಿ ಅಲ್ಲಿಂದ ಖಾಸಗಿ ವಾಹನದಲ್ಲಿ ಕಾಶ್ಮೀರ ಕಣಿವೆಯ ಬಾಲ್ತಾಲ್ ಪ್ರದೇಶಕ್ಕೆ ತೆರಳಿದರು. ಮಳೆಯಿಂದ ಗುಡ್ಡ ಕುಸಿತ ಹಾಗೂ ಹವಾಮಾನ ವೈಪರೀತ್ಯದಿಂದ  ಬಾಲ್ತಾಲ್  ಪ್ರದೇಶದ ಅಮರನಾಥ ಯಾತ್ರೆಗೆ ತೆರಳುವ ಗೇಟ್ ಗೆ ಬೀಗ ಹಾಕಲಾಗಿದೆ.

7 ಜನ ಯಾತ್ರಿಕರು ಕ್ಯಾಂಪ್ ನಲ್ಲಿ ಉಳಿದಿಕೊಂಡಿದ್ದಾರೆ. ಶಿವನ ದರ್ಶನ ಪಡೆದುಕೊಳ್ಳಬೇಕೆಂದು ಭಕ್ತಿಯಿಂದ ತೆರಳಿದ ಯಾತ್ರಿಕರು ಮಳೆ ಚಳಿಗೆ ನಲುಗಿ ಹೋಗಿದ್ರು. ಅಮರನಾಥ ಯಾತ್ರೆ ಸ್ಥಗಿತಗೊಂಡ ಪರಿಣಾಮ ಶಿವನ‌ ದರ್ಶನ ಭಾಗ್ಯ ಪಡೆಯದೆ ವ್ಯಾಪಸ ಈಗ ಕಾಶ್ಮೀರಕ್ಕೆ ಬಂದಿದ್ದು, ವೈಷ್ಣವಿ ದರ್ಶನ ಪಡೆದ ನಂತರ ವಾಪಸ್   ಯಾದಗಿರಿ ಬರಲಾಗುತ್ತದೆ ಎಂದು ಯಾತ್ರಿಕರು ತಿಳಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ