ಕುಂಭದ್ರೋಣ ಮಳೆಗೆ ಕರಾವಳಿ ತತ್ತರ

ಶನಿವಾರ, 7 ಜುಲೈ 2018 (18:02 IST)
ಕುಂಭ ದ್ರೋಣ ಮಳೆಗೆ ಕರಾವಳಿಯ ಉಡುಪಿ ಜಿಲ್ಲೆ ತತ್ತರಿಸಿ ಹೋಗಿದೆ. ಭಾಗಶಃ ಉಡುಪಿಯ ಬಹುತೇಕ ತಗ್ಗು ಪ್ರದೇಶಗಳು ಜಲಾವೃತ್ತ ಗೊಂಡಿದೆ. ಮಳೆಯಿಂದ ಉಡುಪಿಯ ಕರಾವಳಿ ಬೈಪಾಸ್ ಮತ್ತು ನಿಟ್ಟೂರಿನ ಅಂಬಿಕಾ ಟಿಂಬರ್ ಆಸುಪಾಸಿನ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದು, ಅಪಾಯಕಾರಿ  ಸ್ಥಳಗಳಲ್ಲಿರುವ ಸುಮಾರು 60-70 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.

ರಕ್ಷಣೆ ಮಾಡಿದ ಉತ್ತರ ಭಾರತದ ವಲಸೆ ಕಾರ್ಮಿಕರಿಗೆ ಕೊಡಂಕ್ಕೂರಿನ ಹಿರಿಯ ನಾಗರೀಕ ಕೇಂದ್ರದಲ್ಲಿ ತಾತ್ಕಲಿಕ ನೆಲೆಯನ್ನು ಕಲ್ಪಿಸಲಾಗಿದೆ. ನೆರೆಯಲ್ಲಿ ಸಿಲುಕುವ ಭೀತಿಯಲ್ಲಿದ್ದ ಸಂತ್ರಸ್ತರನ್ನು ಮಲ್ಪೆ ಮೀನುಗಾರರು ಹಾಗೂ ಉಡುಪಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ದೋಣಿಯ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆ ತಂದಿದ್ದಾರೆ.

ರಕ್ಷಣಾ ಕಾರ್ಯಾಚರಣೆ  ಸಂದರ್ಭ ಉಡುಪಿ ಶಾಸಕ ರಘುಪತಿ ಭಟ್  ನಗರಸಭೆ ಅಧ್ಯಕ್ಷೆ  ಮೀನಾಕ್ಷೀ ಮಾದವ ಬನ್ನಂಜೆ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ