ಜೂನ್ 30ರಿಂದ ಐತಿಹಾಸಿಕ ʼಅಮರನಾಥ ಯಾತ್ರೆʼ ಆರಂಭ

ಸೋಮವಾರ, 28 ಮಾರ್ಚ್ 2022 (19:36 IST)
ಜೂನ್ 30ರಿಂದ ಐತಿಹಾಸಿಕ ಅಮರನಾಥ ಯಾತ್ರೆ ಆರಂಭವಾಗಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಕಚೇರಿ ತಿಳಿಸಿದೆ.
ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಅಧ್ಯಕ್ಷತೆಯಲ್ಲಿ ಇಂದು ಶ್ರೀಅಮರನಾಥಜೀ ದೇವಾಲಯ ಮಂಡಳಿಯ ಸಭೆ ಭಾನುವಾರ ನಡೆಯಿತು.
ಮುಂಬರುವ ಭೇಟಿಗೆ ಸಂಬಂಧಿಸಿದ ವಿವಿಧ ವಿಷಯಗಳನ್ನ ಸಭೆಯಲ್ಲಿ ಆಳವಾಗಿ ಚರ್ಚಿಸಲಾಯಿತು. ಅದ್ರಂತೆ, ಈ ಬಾರಿಯ ಅಮರನಾಥ ಯಾತ್ರೆಯು ಜೂನ್ 30 ರಿಂದ ಪ್ರಾರಂಭವಾಗಿ ರಕ್ಷಾ ಬಂಧನದ ದಿನದಂದು ಸಂಪ್ರದಾಯದಂತೆ ಕೊನೆಗೊಳ್ಳಲು ನಿರ್ಧರಿಸಲಾಗಿದೆ.
ಅದ್ರಂತೆ, ಈ ವರ್ಷ, ಭಕ್ತರು ಸುಮಾರು 43 ದಿನಗಳ ಕಾಲ ಬಾಬಾ ಬರ್ವಾನಿಯ ದರ್ಶನ ಪಡೆಯಲು ಸಾಧ್ಯವಾಗುತ್ತದೆ. ಆದ್ರೆ, ಪ್ರಯಾಣದ ಸಮಯದಲ್ಲಿ ಕೋವಿಡ್ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಕಡ್ಡಾಯವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ