ರಾಜ್ಯದಲ್ಲಿ ಮತ್ತೊಂದು ಅಪಘಾತ ..!! ಏನಿದು ????

ಶುಕ್ರವಾರ, 29 ಜುಲೈ 2022 (16:17 IST)
ರಾಜ್ಯದಲ್ಲಿ ಇತ್ತೀಚೆಗಷ್ಟೇ ಆಂಬ್ಯುಲೆನ್ಸ್ ದುರಂತವೊಂದು ನಡೆದು ಟೋಲ್ ಗೇಟ್ ನಲ್ಲಿ ಸಾವು ನೋವು ಸಂಭವಿಸಿದ್ದು ಇನ್ನೂ ಈ 1ಘಟನೆ ಮಾಸುವ ಮುನ್ನ ತುಮಕೂರಿನಲ್ಲಿ ಮತ್ತೆ ಅಂಬುಲೆನ್ಸ್ ಅಪಘಾತ ನಡೆದಿದೆ ಅದೃಷ್ಟವಶಾತ್ ಯಾರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ...!!!
 
ತುಮಕೂರು ನಗರದ ಶಿರಾ ಗೇಟ್ ಎಸ್.ಮಾಲ್ ಬಳಿ ಆಯಂಬುಲೆನ್ಸ್‌ ಅಪಘಾತಕ್ಕಿಡಾಗಿದೆ. ಶಿರಾದಿಂದ ತುಮಕೂರು ಜಿಲ್ಲಾಸ್ಪತ್ರೆಗೆ ರೋಗಿಯನ್ನು ಕರೆ ತರುತ್ತಿದ್ದ ಈ ಘಟನೆ ಸಂಭವಿಸಿದೆ.
 
ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿದ್ದು, ಚಾಲಕನಿಗೆ ಗಾಯವಾಗಿದೆ.ಕಿರಿದಾದ ರಸ್ತೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.ಸೇತುವೆಗೆ ಡಿಕ್ಕಿ ಹೊಡೆದು ಪಲ್ಟಿಯಾದ ಆಯಂಬುಲೆನ್ಸ್‌. ಗಾಯಾಳು ಚಾಲಕನಿಗೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ