'ಅಕ್ಕ' ಸಮ್ಮೇಳನದಲ್ಲಿ ಭಾಗಿಯಾಗಬೇಕಿದ್ದ ಬಾಲ ರಾಮನ ಕೆತ್ತಿದ ಅರುಣ್ ಯೋಗಿರಾಜ್‌ಗೆ ಶಾಕ್ ನೀಡಿದ ಅಮೆರಿಕ

Sampriya

ಬುಧವಾರ, 14 ಆಗಸ್ಟ್ 2024 (18:39 IST)
Photo Courtesy X
ಮೈಸೂರು: ಅಕ್ಕ ಸಮ್ಮೇಳನದಲ್ಲಿ ಭಾಗಿಯಾಗಲು ಬಾಲರಾಮನ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಅಮೆರಿಕ ವೀಸಾವನ್ನು ರಿಜೆಕ್ಟ್ ಮಾಡಿದ ಕಾರಣ ಇದೀಗ ಯೋಗಿರಾಜ್ ಅವರು ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿಲ್ಲ.

ಅಯೋಧ್ಯೆಯ ಬಾಲ ರಾಮನ ಮೂರ್ತಿಯನ್ನು ಕೆತ್ತಿದ್ದ ಶಿಲ್ಪಿ ಅರುಣ್‌ ಯೋಗಿರಾಜ್‌  ಅವರಿಗೆ ಅಮೆರಿಕ ವೀಸಾ ನೀಡಲು ನಿರಾಕರಿಸಿದೆ.

ಹೌದು. ಅಮೇರಿಕದಲ್ಲಿರುವ ಕನ್ನಡಿಗರು ನಡೆಸುವ 12ನೇ ವಿಶ್ವ ಅಕ್ಕಸಮ್ಮೇಳನದ ಮುಖ್ಯ ಅತಿಥಿಯಾಗಿ ಅರುಣ್‌ ಯೋಗಿರಾಜ್‌ ಅಮೆರಿಕಕ್ಕೆ ತೆರಳಬೇಕಿತ್ತು.

ಈ ಸಂಬಂಧ ಅವರು ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರು.ಇನ್ನೂ ಅರುಣ್ ಅವರ ಪತ್ನಿ ಈಗಾಗಲೇ ಅಮೆರಿಕಾಕ್ಕೆ ತೆರಳಿದ್ದಾರೆ. ಇನ್ನೂ ವೀಸಾ ಕಾರಣ ಯಾಕೆ ಆಯಿತು ಎಂಬುದು ತಿಳಿದುಬಂದಿಲ್ಲ. ಇದರಿಂದ ಯೋಗಿರಾಜ್ ಅವರ ಕುಟುಂಬ ಬೇಸರ ವ್ಯಕ್ತಪಡಿಸಿದ್ದಾರೆ. ಇದೇ 30ರಿಂದ ಸೆಪ್ಟೆಂಬರ್ 1ರ ವರೆಗೆ  ಅಮೇರಿಕದ ವರ್ಜೀನಿಯಾದ ರಿಚ್‌ಮಂಡ್‌ನಲ್ಲಿರುವ ಗ್ರೇಟರ್ ರಿಚ್‌ಮಂಡ್ ಕನ್ವೆನ್ಷನ್ ಸೆಂಟರ್‌ನಲ್ಲಿಅಕ್ಕ ಸಮ್ಮೇಳನ ಆಯೋಜನೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ