ಅಯೋಧ್ಯೆ ಬಾಲರಾಮನನ್ನು ಕೆತ್ತಿದ ಶಿಲ್ಪಿ ಅರುಣ್ ಯೋಗಿಗೆ ವೀಸಾ ನಿರಾಕರಿಸಿದ ಅಮೆರಿಕಾ

Krishnaveni K

ಬುಧವಾರ, 14 ಆಗಸ್ಟ್ 2024 (16:30 IST)
ಮೈಸೂರು: ಅಯೋಧ್ಯೆಯ ಬಾಲರಾಮನ ವಿಗ್ರಹವನ್ನು ಕೆತ್ತಿ ವಿಖ್ಯಾತಿ ಪಡೆದ ಮೈಸೂರಿನ ಅರುಣ್ ಯೋಗಿಗೆ ಅಮೆರಿಕಾ ವೀಸಾ ನಿರಾಕರಿಸಿದೆ. ಇದಕ್ಕೆ ಸೂಕ್ತ ಕಾರಣವನ್ನೂ ನೀಡದೇ ಇರುವುದು ಅಚ್ಚರಿಗೆ ಕಾರಣವಾಗಿದೆ.

ಅರುಣ್ ಯೋಗಿ ಅಮೆರಿಕಾದಲ್ಲಿ ನಡೆಯಲಿರುವ ಅಕ್ಕ ಸಮ್ಮೇಳನದಲ್ಲಿ ಭಾಗಿಯಾಗಬೇಕಿತ್ತು. ಅದಕ್ಕಾಗಿ ವೀಸಾಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕೆಲವು ನಿಬಂಧನೆಗಳನ್ನು ಪೂರ್ತಿ ಮಾಡಿಲ್ಲ ಎಂದು ಕಾರಣ ನೀಡಿ ಖ್ಯಾತ ಶಿಲ್ಪಿಗೆ ಅಮೆರಿಕಾ ವೀಸಾ ನಿರಾಕರಿಸಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಅಕ್ಕ ಸಮ್ಮೇಳನದಲ್ಲಿ ಭಾಗಿಯಾಗಲು ಜೂನ್ ನಲ್ಲೇ ವೀಸಾಗಾಗಿ ಅರುಣ್ ಯೋಗಿ ಅರ್ಜಿ ಸಲ್ಲಿಸಿದ್ದರು. ಆದರೆ ಇದೀಗ ವೀಸಾ ನಿರಾಕರಣೆಯಾಗಿದೆ. ಅಕ್ಕ ಸಮ್ಮೇಳನದಲ್ಲಿ ಭಾಗಿಯಾಗಲು ಅರುಣ್ ಯೋಗಿ ಮತ್ತು ಕುಟುಂಬಕ್ಕೆ ಆಹ್ವಾನ ನೀಡಲಾಗಿತ್ತು. ಆದರೆ ಅವರಿಗೆ ಈಗ ವೀಸಾ ನಿರಾಕರಿಸಲಾಗಿದೆ.

ಎಲ್ಲಾ ದಾಖಲೆಗಳನ್ನೂ ನೀಡಿದರೂ ಈಗ ವೀಸಾ ನಿರಾಕರಿಸಿರುವುದು ಯಾಕೆ ಎಂದು ಸ್ಪಷ್ಟ ಕಾರಣ ತಿಳಿದಿಲ್ಲ ಎಂದು ಅರುಣ್ ಯೋಗಿ ಹೇಳಿದ್ದಾರೆ. ಆದರೆ ಮತ್ತೆ ವೀಸಾಗೆ ಅರ್ಜಿ ಸಲ್ಲಿಸಲ್ಲ ಎಂದಿದ್ದಾರೆ. ಕೇವಲ ರಾಮಲಲ್ಲಾನ ಮೂರ್ತಿ ಮಾತ್ರವಲ್ಲ, ಹಲವು ವಿಗ್ರಹಗಳನ್ನು ಮಾಡಿ ಕರ್ನಾಟಕದ ಮನೆ ಮಾತಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ