ಅಮಿತ್ ಶಾ ಎಲೆಕ್ಷನ್ ಗಿಮಿಕ್: ಸಿದ್ದಗಂಗಾ ಮಠಕ್ಕೆ ನೆಪಮಾತ್ರ ಭೇಟಿ

ಸೋಮವಾರ, 26 ಮಾರ್ಚ್ 2018 (13:35 IST)
ಮುಂಬರುವ ವಿಧಾನ ಸಭಾ ಚುನಾವಣೆ ಗುರಿಯಾಗಿಸಿಕೊಂಡು  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಶಾ ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಆದರೆ ಭಾರತ ರತ್ನ ಪ್ರಶಸ್ತಿಗೆ ಬಗ್ಗೆ ಯಾವ‌ ಪ್ರಸ್ತಾಪ‌ ಮಾಡಲಿಲ್ಲ. ಕೇವಲ ಚುನಾವಣೆ ಗುರಿಯಾಗಿಸಿಕೊಂಡು ನೆಪ‌ ಮಾತ್ರಕ್ಕೆ 1೦  ನಿಮಿಷಗಳ ಕಾಲ ಮಾತುಕತೆ ನಡೆಸಿದರು. 
ಅಮಿತ್ ಶಾ ನೋಡಲು ಆಗಮಿಸಿದ್ದ ಬಿಜೆಪಿ ನಾಯಕರಿಗೂ ತೀವ್ರ ಮುಜುಗರ ಉಂಟಾಯಿತು.‌ ಮಾಜಿ ಸಚಿವ ಸೊಗಡು ಶಿವಣ್ಣ ಬೆಂಬಲಿಗರು ಮಠದ ಒಳಗೆ ಬಿಟ್ಟಿಲ್ಲ ಎಂದು ಪ್ರತಿಭಟನೆ ನಡೆಸಿದರು. ಶಾ ಆಗಮನದಿಂದ ಒಂದಾಗಬೇಕಾಗಿದ್ದ ಸ್ಥಳೀಯ ಬಿಜೆಪಿ ನಾಯಕರು ಮತ್ತಷ್ಟು ದೂರದಾರು ಎನ್ನಬಹುದು. 
 
ಏಪ್ರಿಲ್ 1 ಕ್ಕೆ ಶ್ರೀಗಳ 111 ನೇ ಹುಟ್ಟುಹಬ್ಬವಿದ್ದು  ಈ ಬಾರಿಯಾದರೂ ಶ್ರೀಗಳಿಗೆ ಭಾರತ ರತ್ನ ನೀಡಬಹುದು, ಆ ಬಗ್ಗೆ ಬಿಜೆಪಿ ನಾಯಕರು ಅಮಿತ್ ಶಾ ಮೂಲಕ ಕೇಂದ್ರ ಸರ್ಕಾರ ಕ್ಕೆ ಒತ್ತಡ ಹಾಕಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಅಮಿತ್ ಶಾ ಬೇಟಿ ಸಂಪೂರ್ಣ ಚುನಾವಣಾ ಗಿಮಿಕ್ ಆಗಿ ಮಾರ್ಪಟ್ಟಿತ್ತು.
 
ಶ್ರೀ ಗಳ ಭೇಟಿ‌ ಬಳಿಕ ಅಮಿತ್ ಶಾ ಹೇಳಿಕೆ.
 
ಶ್ರೀ ಗಳನ್ನ ಭೇಟಿ ಮಾಡಿರುವುದು ತುಂಬಾ ಖುಷಿ ಯಾಗಿದೆ‌.ಈ ವಯಸ್ಸಿನಲ್ಲಿ ಇಷ್ಟೋಂದು ಸಂಸ್ಥೆ ಗಳನ್ನು ನಡೆಸುತ್ತಿರುದು ಆಶ್ಚರ್ಯಕರ ವಾಗಿದೆ. ಇದು ಚುನಾವಣೆ ಸಮಯವಾದ ಕಾರಣ ಶ್ರೀ ಗಳ ಭೇಟಿ ನಮ್ಮ ಪಕ್ಷಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸಲಿದೆ ಎಂದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ