ದೇಶ ವಿರೋಧಿ ಘೋಷಣೆ; ಅಮೂಲ್ಯ ಹಾಗೂ ಆರ್ದ್ರಾ ಇಬ್ಬರಿಗೂ ಒಂದೇ ಸೆಲ್!

ಶನಿವಾರ, 22 ಫೆಬ್ರವರಿ 2020 (12:08 IST)
ಬೆಂಗಳೂರು: ವೇದಿಕೆ ಕಾರ್ಯಕ್ರಮವೊಂದರಲ್ಲಿ ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ ಹಾಗೂ ಫ್ರೀ ಕಾಶ್ಮೀರ ಭಿತ್ತಿಪತ್ರ ಪ್ರದರ್ಶಿಸಿದ ಹಿನ್ನೆಲೆ ಆರ್ದ್ರಾ ಎಂಬ ಯುವತಿ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.


ಆಮೂಲ್ಯ ಆರ್ದ್ರಾ ಇಬ್ಬರನ್ನು ಪರಪ್ಪನ ಆಗ್ರಹಾರದಲ್ಲಿ ಇಬ್ಬರಿಗೂ ಒಂದೇ ಸೆಲ್ ನೀಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಕಾರಾಗೃಹದ ಮೂಲಗಳ ಮಾಹಿತಿ ಪ್ರಕಾರ ತಿಳಿದು ಬಂದಿದೆ.


ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಸಮಾವೇಶದಲ್ಲಿ ಕೊಪ್ಪ ಮೂಲದ ಅಮೂಲ್ಯ ಲಿಯೋನ ದೇಶ ವಿರೋಧಿ ಘೋಷಣೆ ಕೂಗಿದ್ದಳು. ಇನ್ನು ಆರ್ದ್ರಾ ಕೂಡ ಟೌನ್ ಹಾಲ್ ಬಳಿ ಫ್ರೀ ಕಾಶ್ಮೀರ ಭಿತ್ತಪತ್ರವನ್ನು ಪ್ರದರ್ಶಿಸಿದ್ದಳು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ