ಜೆಡಿಎಸ್ ನಾಯಕ ಸಿ.ಚನ್ನಿಗಪ್ಪ ನಿಧನ

ಶುಕ್ರವಾರ, 21 ಫೆಬ್ರವರಿ 2020 (10:40 IST)
ತುಮಕೂರು : ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಅರಣ್ಯ ಸಚಿವ, ಜೆಡಿಎಸ್ ನಾಯಕ ಸಿ.ಚನ್ನಿಗಪ್ಪ ಇಂದು ನಿಧನರಾಗಿದ್ದಾರೆ.


ಹಲವು ದಿನಗಳಿಂದ ಬಹು ಅಂಗಾಂಗಗಳ ವೈಫಲ್ಯದಿಂದ ಬಳಲುತ್ತಿದ್ದ ಇವರು ವಿದೇಶದಿಂದ ಚಿಕಿತ್ಸೆ ಪಡೆದು ಬಳಿಕ ಅಲ್ಲಿಂದ ಮರಳಿ ಬೆಂಗಳೂರಿನ ಸಾಗರ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.


ಇವರು ಮೂವರು ಪುತ್ರರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯು  ನೆಲಮಂಗಳ ತಾಲೂಕಿನ ಬೈರನಾಯಕನಹಳ್ಳಿಯಲ್ಲಿ ನಡೆಯಲಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ