ಬೆಂಗಳೂರಲ್ಲಿ ಆಧಾರ್ ಅಪ್ ಡೇಟ್ ಸಂಕಷ್ಟ ಮುಗಿದಿಲ್ಲ.ಹೇಳೋರಿಲ್ಲ, ಕೇಳೋರಿಲ್ಲ ಬೆಂಗಳೂರು ಒನ್ ಕೇಂದ್ರಗಳ ದರ್ಬಾರ್ ಅನ್ನುವ ಆಗಾಗಿದೆ.ಹಿರಿಯ ನಾಗರೀಕರಿಗೆ ಸೂಕ್ತ ನೆರವು ಸಿಕ್ತಿಲ್ಲ.ಆಧಾರ್ ಅಪ್ ಡೇಟ್ ಮಾಡಿಸಲು ಪರದಾಟ ನಿಲ್ತಿಲ್ಲ.ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ ಅಂತಾ ಹಿರಿಯರ ಆರೋಪ ಮಾಡಿದ್ದು,ಆಧಾರ್ ಅಪ್ ಡೇಟ್ ಗೆ ದಿನಕ್ಕೆ 50 ಟೋಕನ್ ನಿಗಧಿ ಮಾಡಲಾಗಲಾಗುತ್ತೆ.ಆದ್ರೆ ಟೋಕನ್ ಸಿಕ್ಕರೂ,ಸಿಗದಿದ್ರೂ ಕಾಯುವ ಸಂಕಷ್ಟ ಎದುರಾಗಿದೆ.ಆಧಾರ್ ಅಪ್ ಡೇಟ್ ಗೆ ಸುತ್ತಿ ಹಿರಿಯ ನಾಗರೀಕರು ಸುಸ್ತಾಗಿದ್ದಾರೆ.ಹಿರಿಯ ನಾಗರೀಕರ ಸಮಸ್ಯೆಗೆ ಸಿಬ್ಬಂದಿ ಸ್ಪಂದಿಸುತ್ತಿಲ್ಲ.ಬೆಂಗಳೂರು ಒನ್ ಕೇಂದ್ರದ ಸಿಬ್ಬಂದಿ ವಿರುದ್ಧ ಕಿಚ್ಚು ಹೆಚ್ಚಾಗಿದ್ದು,ಸಿಬ್ಬಂದಿಯ ಅಸಡ್ಡೆಯಿಂದ ಹಿರಿಯ ನಾಗರೀಕರು ಹೈರಾಣಾಗಿದ್ದಾರೆ.ಬೆಂಗಳೂರಿನ ಎನ್ ಆರ್ ಕಾಲೋನಿ ನಲ್ಲಿರೋ ಕೇಂದ್ರದಲ್ಲಿ ಗಂಟೆಗಟ್ಟಲೆ ಕಾದು ಹಿರಿಯ ನಾಗರೀಕರು,ಜನರು ಸುಸ್ತಾಗಿದ್ರು.