10 ಶಾಸಕರ ಅಮಾನತು ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿದ ಬಿಜೆಪಿ..!

ಶನಿವಾರ, 22 ಜುಲೈ 2023 (12:55 IST)
ಬಿಜೆಪಿಯ ಶಾಸಕರ ಅಮಾನತು ಖಂಡಿಸಿ ವಿಧಾನ ಸಭೆ, ಪರಿಷತ್ ಕಲಾಪ ಬಹಿಷ್ಕರಿಸಿದ ಬಿಜೆಪಿ ಶಾಸಕರು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಇಂದೂ ಕೂಡ ಪ್ರತಿಭಟನೆ ಮುಂದುವರಿ, ಸಿಐಎಎಸ್ ಅಧಿಕಾರಿಗಳ ದುರ್ಬಳಕೆ, ಭ್ರಷ್ಟ ಸರ್ಕಾರ‌,ಸಂವಿಧಾನ ವಿರೋಧಿ ಸರ್ಕಾರ ಎಂದು ಧಿಕ್ಕಾರ ಕೂಗುವುದರ ಮೂಲಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.

ವಿಧಾನಮಂಡಲ ಅಧಿವೇಶನ ಇಂದು ಕೊನೆಗೊಂಡಿದ್ದು,ಅಧಿವೇಶನ ಆರಂಭದ ದಿನಗಳಿಂದ ಬಿಜೆಪಿ ಹಾಗೂ ಜೆಡಿಎಸ್ ಕೆಲವು ವಿಚಾರಗಳನ್ನು ಮುಂದಿಟ್ಟುಕೊಂಡು ಕಲಾಪಕ್ಕೆ ಅಡ್ಡಿ ಉಂಟು ಮಾಡಿತ್ತು. ಇದೀಗ ಕೊನೆಯ ದಿನವೂ ಕಲಾಪ ಬಹಿಷ್ಕಾರ ಮಾಡಿ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರ ಹಾಗೂ ಸ್ಪೀಕರ್ ನಡೆಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಂತ ಸ್ಪೀಕರ್ ಅವರು ಎಲ್ಲಾ ಸದಸ್ಯರನ್ನು ಕರೆದು ಮತ್ತೊಮ್ಮೆ ಸಭೆನಡೆಸಿ ಈ ವಿವಾದವನ್ನು ಬಗೆಹರಿಸಬಹುದಿತ್ತು ಆದ್ರೆ ಸ್ಪೀಕರ್ ಅವರು ಸರ್ಕಾರದ ಕೈ ಗೊಂಬೆಯಾಗಿ ಕೆಲಸ ಮಾಡ್ತಾ ಇದಾರೆ ಹಾಗಾಗಿ ಸಿದ್ದರಾಮಯ್ಯ ನವರ ಕಣ್ಣು ಸನ್ನೆ ಪ್ರಕಾರ ಸ್ಪೀಕರ್ ಅವರು ಕೆಲಸ ಮಾಡ್ತಾ ಇದಾರೆ ಇದನ್ನ ನಾವು ಖಂಡಿಸುತ್ತೇವೆ.. ಯಾವುದೇ ಕಾರಣಕ್ಕೂ ನಮ್ಮ ಹೋರಾಟವನ್ನು ನಾವು ಇಲ್ಲಿಗೆ ಕೈ ಬಿಡುವುದಿಲ್ಲ ನಮ್ಮ ಹೋರಾಟ ನಿರಂತರವಾಗಿ ಇರುತ್ತೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರವಗಿ ಹೋರಾಟ ಮಾಡ್ತೀವಿ ಎಂದು ಸರ್ಕಾರಕ್ಕೆ ಮತ್ತು ಸ್ಪೀಕರ್ ಗೆ ಎಚ್ಚರಿಕೆ ನೀಡಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ