ಬೆಂಗಳೂರು (ಆ 25); ವಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗಿಂದಾಗ್ಗೆ ಕಾಂಗ್ರೆಸ್ ನಾಯಕರು, ಅದರಲ್ಲೂ ಮುಖ್ಯವಾಗಿ ಮಾಜಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರುವುದು ಮಾಮೂಲಿ ವಿಚಾರವಾಗಿಬಿಟ್ಟಿದೆ.ಸೋಮವಾರ ಸಹ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದ ಬಸನಗೌಡ ಪಾಟೀಲ್ ಯತ್ನಾಳ್, "ರಾಹುಲ್ ಗಾಂಧಿ ಓರ್ವ ಹುಚ್ಚ. ಆತ ಹಿಂದುವೋ? ಕ್ರಿಶ್ಚಿಯನ್ನೋ? ಬಲ್ಲವರಾರು" ಎಂದು ಅವಹೇಳನ ಮಾಡಿದ್ದರು