ಗದಗ ನಗರದ ಟಾಂಗಾ ಹತ್ತಿರ ಸುಮಾರು ಐವತ್ತು ವರ್ಷಗಳಿಂದ ಓರ್ವ ವೃದ್ಧ ಬಜ್ಜಿ ವ್ಯಾಪಾರ ಮಾಡ್ತಿದ್ದ. ಜನನಿಬಿಡ ಪ್ರದೇಶವಾಗಿದ್ದರಿಂದ ಅಲ್ಲಿ ವೃದ್ಧನ ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿತ್ತು. ಷಮ್ಷಾದ್ ಎಂಬ ವೃದ್ಧನ ಅಂಗಡಿಯ ಬಜ್ಜಿ ತಿನ್ನಲು ಜನ ಮುಗಿಬೀಳುತ್ತಿದ್ದರು. ಆತ ಜಸ್ಟ್ ತಳ್ಳೋಗಾಡಿಯಲ್ಲಿ ಮಾಡ್ತಿದ್ದ ಈ ಬಜ್ಜಿ ವ್ಯಾಪಾರಕ್ಕೆ ಜನ ಪಿದಾ ಆಗಿಬಿಟ್ಟಿದ್ದರು. ಅದರಲ್ಲೂ ಗದಗ ಬೆಟಗೇರಿ ಅಂದ್ರೆ ಬಜ್ಜಿ ವ್ಯಾಪಾರಕ್ಕೆ ಹೇಳಿ ಮಾಡಿಸಿದ ಸ್ಥಳ. ಯಾಕೆಂದರೆ ಇಲ್ಲಿ ಬಜ್ಜಿ ವ್ಯಾಪಾರ ಬರಪೂರ್ ನಡೆಯುತ್ತೆ. ಸಂಜೆ ಅಥವಾ ಸಾಯಂಕಾಲ ಆಯ್ತು ಅಂದ್ರೆ ಬದನೆಕಾಯಿ ಬಜ್ಜಿ ತಿನ್ನಲು ಜನ ಕುಟುಂಬ ಸಮೇತ ಹೊರಗೆಬೀಳ್ತಾರೆ ಅದರಂತೆ ಈ ವೃದ್ಧನ ವ್ಯಾಪಾರವೂ ಅಷ್ಟೇ ಜನಮೆಚ್ಚುಗೆ ಗಳಿಸಿತ್ತು. ಆದ್ರೆ ಇತ್ತೀಚಿಗೆ ಈ ವೃದ್ಧನ ಅಂಗಡಿ ಎದರಿಗೆ ಚಿನ್ನದ ಅಂಗಡಿ ತಲೆ ಎತ್ತಿದೆ. ಹೊಸದಾಗಿ ಶುರುವಾಗಿದ್ದರೂ ಜನ ಬರ್ತಿರಲಿಲ್ಲ. ಹೀಗಾಗಿ ನನ್ನ ವ್ಯಾಪಾರದ ಹಿನ್ನಡೆಗೆ ಈ ವೃದ್ಧನ ಅಂಗಡಿಯೇ ಅಂತ ತಿಳಿದು ನಗರಸಭೆಯ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಎತ್ತಂಗಡಿ ಮಾಡಿಸಿದ್ದಾರೆ. ಹಿಂದೂ ಮುಂದು ಯೋಚನೆ ಮಾಡದೆ ತಳ್ಳೋಗಾಡಿಯನ್ನ ಅಧಿಕಾರಿಗಳು ನಗರಸಭೆಯ ಆವರಣದಲ್ಲಿ ತಂದಿಟ್ಟಿದ್ದಾರೆ. ಇದರಿಂದ ವೃದ್ಧನ ಆಕ್ರೋಶ ಕ್ಕೆ ಕಾರಣವಾಗಿದೆ. ಚಿನ್ನದ ವ್ಯಾಪಾರಿಗಳ ಜೊತೆ ನಗರಸಭೆ ಅಧಿಕಾರಿಗಳು ಶಾಮೀಲಾಗಿ ನಮ್ಮ ಹೊಟ್ಟೆಯ ಮೇಲೆ ಬರೆ ಎಳೆದಿದ್ದಾರೆ ಎಂದು ಆರೋಪಿಸಿದರು. ಬಡವರಿಗೊಂದು ಸಿರಿವಂತರಿಗೊಂದು ನ್ಯಾಯನ ಅಂತ ಪ್ರಶ್ನೆ ಮಾಡ್ತಿದ್ದಾರೆ