ಒಂದು ಸಾವಿರ ಹಣಕ್ಕೆ ವೃದ್ಧನ ಹೊಟ್ಟೆಗೆ ಚಾಕು ಇರಿತ

ಗುರುವಾರ, 23 ಫೆಬ್ರವರಿ 2023 (19:48 IST)
ವೃದ್ಧ ತನ್ನ ಪಾಡಿಗೆ ತಾನು ನಡೆದುಕೊಂಡು‌ ಹೋಗ್ತಿದ್ದ.ಅಡ್ರಸ್ ಕೇಳೋ ನೆಪದಲ್ಲಿ ಇಬ್ಬರು ಯುವಕರು ಫಾಲೋ ಮಾಡಿದ್ರು.ಹೀಗೆ ಬಂದವರು ಇದ್ದಕ್ಕಿದ್ದಂತೆ ಹೊಟ್ಟೆಗೆ ಚಾಕು ಹಾಕಿಬಿಟ್ಟಿದ್ರು.ಜೇಬಲ್ಲಿದ್ದ ಹಣ ದೋಚಿ ಪರಾರಿಯಾಗಿದ್ರು.ವೃದ್ಧನ ಕರುಳೇ ಹೊರಗೆ ಬಂದಿತ್ತು.ಕ್ಲೂ ಇಲ್ಲದ ಕೇಸನ್ನ ಪೊಲೀಸರು ಬೇಧಿಸಿದ್ದೇ ರೋಚಕ.ವೃದ್ಧ ನಡೆದುಕೊಂಡು ಹೋಗ್ತಿದ್ರೆ ಹಿಂದ್ಹಿಂದೇನೆ ಹೋಗ್ತಿದ್ದ.ಅಲ್ಲಿಗ್ ಹೋಗೋದ್ ಹೆಂಗೆ.ಇಲ್ಲಿಗ್ ಹೋಗೋದ್ ಹೆಂಗೆ ಅಂತೆಲ್ಲ  ಅಡ್ರಸ್ ಕೇಳ್ತಿದ್ದ ವೃದ್ಧ ಕೂಡ ಊರಿಗೆ ಹೊಸಬ ಇರಬಹುದು ಅಂತಾ ಅಡ್ರಸ್ ಹೇಳ್ತಾ ಬರ್ತಿದ್ದ‌.ಹೀಗೆ ಬಂದವನು ಸುತ್ತಾ ಮುತ್ತಾ ಜನ ಇಲ್ಲದನ್ನ ನೋಡಿ ವೃದ್ಧನ ಹೊಟ್ಟೆಗೆ ಚಾಕುವಿನಿಂದ ಇರಿದೇ ಬಿಟ್ಟಿದ್ದ.ಜೇಬಲ್ಲಿದ್ದ 1 ಸಾವಿರ ಹಣ ಕಸಿದು ಪರಾರಿಯಾಗಿದ್ದ

ಅದು ಫೆಬ್ರವರಿ 12,ರಾತ್ರಿ 11.30  ರ ಸಮಯ.ಸುಂಕದಕಟ್ಟೆಯ ವಿಘ್ನೇಶ್ವರನಗರ.ಶಿವಣ್ಣ ಎಂಬ ವೃದ್ಧ ನಡೆದುಕೊಂಡು‌ ಹೋಗ್ತಿದ್ದ.ದುರಾದೃಷ್ಟಕ್ಕೆ ಏರಿಯಾದಲ್ಲಿ ಕರೆಂಟ್ ಹೋಗಿತ್ತು.ಒಬ್ಬರೇ ಬರೋದನ್ನೆ ಹೊಂಚುಹಾಕಿ ಕೂತಿದ್ದ ಆಸಾಮಿಗಳಾದ ಕೃಷ್ಣ ಮತ್ತು ನಿರಂಜನ್ ಫಾಲೋ ಮಾಡಿದ್ರು.ನಿರಂಜನ್ ದೂರದಲ್ಲಿ ನಿಂತಿದ್ರೆ ಕೃಷ್ಣ ಮಾತ್ರ ವೃದ್ಧನ ಜೊತೆಯಲ್ಲೇ ನಡೆದುಕೊಂಡು‌ಹೋಗ್ತಿದ್ದ.ಅಡ್ರಸ್ ಕೇಳೋ ನೆಪದಲ್ಲಿ ಫಾಲೋ ಮಾಡ್ತಿದ್ದ.ಹೀಗೆ ಬರ್ತಿದ್ದವನು ಅಕ್ಕಪಕ್ಕ ಯಾರು ಇಲ್ಲ ಅಂತಾ ಗೊತ್ತಾಗ್ತಿದ್ದಂತೆ ವೃದ್ಧನ ಬಳಿ ಹಣ ಕೇಳಿದ್ದಾನೆ,ಕೊಡದಿದ್ದಾಗ ಹೊಟ್ಟೆಗೆ ಚಾಕುವಿನಿಂದ ಇರಿದು ಜೇಬಲ್ಲಿದ್ದ 1 ಸಾವಿರ ರೂಪಾಯಿ ತೆಗೆದುಕೊಂಡು ಪರಾರಿಯಾಗಿದ್ದಾನೆ.ಚಾಕು ಚಿಚ್ಚಿದ ರಭಸಕ್ಕೆ ಹೊಟ್ಟೆಯಲ್ಲೊದ್ದ ಕರುಳೇ ಹೊರಬಂದಿತ್ತು.ತಕ್ಷಣ ಆತನನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಸಿ ಚಿಕಿತ್ಸೆ ಕೊಡಿಸಿದ್ದಾರೆ.

ಇನ್ನೂ ಆರೋಪಿಗಳು ತುಮಕೂರು ಜಿಲ್ಲೆ,ಕುಣಿಗಲ್ ತಾಲ್ಲೂಕಿನ ಹೊಡಘಟ್ಟ ಗ್ರಾಮದವ್ರು.ಬಾರ್ ನಲ್ಲಿ ಕೆಲಸ ಮಾಡ್ತಿದ್ದವರು.ಕಳ್ಳತನವನ್ನು ಕಾಯಕ ಮಾಡಿಕೊಂಡಿದ್ರು.ಅಲ್ಲದೇ ಇತ್ತೀಚೆಗೆ ಬಾರ್ ನಲ್ಲಿ ಕೆಲಸ ಬಿಟ್ಟಿದ್ರು ಹಾಗಾಗಿ ಖರ್ಚಿಗೂ ಕಾಸಿಲ್ಲದೇ ರಾಬರಿಗೆ ಇಳಿದಿದ್ರು ಅನ್ನೋದು ಗೊತ್ತಾಗಿದೆ.ಇನ್ನೊಂದು ಬೇಸರದ ಸಂಗತಿ ಅಂದರೆ ಹೊಟ್ಟೆಪಾಡಿಗಾಗಿ ವೃದ್ಧ ಬೆಳಗ್ಗೆ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿದ್ರೆ ಸಂಜೆ ತರಕಾರಿ ವ್ಯಾಪಾರ ಮಾಡ್ತಿದ್ದ.ಸದ್ಯ ಆಸ್ಪತ್ರೆ ಖರ್ಚೇ 3 ಲಕ್ಷ ಆಗಿದ್ದು ಪರದಾಡ್ತಿದ್ದಾರೆ.ಇನ್ನೂ ಆರೋಪಿ ಪರಾರಿಯಾದ ಬಳಿಕ ಪೊಲೀಸರಿಗೆ ಸುಳಿವೇ ಇರಲಿಲ್ಲ.ಒಂದು ವಾರ ನಿರಂತರ ಪರಿಶ್ರಮದಿಂದಾಗಿ ಕೃಷ್ಣ ಹಾಗೂ ನಿರಂಜನ್ ಬಂಧಿಸಿದ್ದು ,ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಚಾಕು,ಕಳ್ಳತನ ಮಾಡಿದ್ದ ಮೂರು ದ್ವಿಚಕ್ರವಾಹನ,ನಗದು ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ