ವ್ಯಕ್ತಿಯೊಬ್ಬ ನಿಮ್ಮ ಬ್ಯಾಂಕ್ ಖಾತೆ ಉಪಯೋಗಿಸಿ ಮನಿಲ್ಯಾಂಡರಿಗ್ ಮಾಡುತ್ತಿದ್ದಾನೆ. ಹೀಗಾಗಿ ನೀವು ಆರೋಪಿಯಾಗಿದ್ದು, ನಾವು ನಿಮ್ಮನ್ನು ವಿಚಾರಣೆ ಮಾಡಬೇಕಿದೆ ಎಂದು ಬೆದರಿಸಿದ್ದಾರೆ. ನಂತರ ಸ್ಕೈಪ್ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಿ ಅಂತಾ ಹೇಳಿ ನಂತರ ಮಹಿಳೆಯನ್ನು ನಂಬಿಸಲು ನಕಲಿ ಅಧಿಕಾರಿಗಳ ಐಡಿ ಕಾರ್ಡ್ ಕಳುಹಿಸಿದ್ದಾರೆ.
ನಿಮ್ಮ ಖಾತೆಯಲ್ಲಿರುವ ಹಣವನ್ನು ನಮಗೆ ವರ್ಗಾಯಿಸಬೇಕು. ಇಲ್ಲದಿದ್ದರೆ ನಿಮಗೆ ತೊಂದರೆಯಾಗಿ ತಪ್ಪಿತಸ್ಥರಾಗುತ್ತೀರಿ. ತನಿಖೆಗೆ ನೀವು ಸಹಕರಿಸಬೇಕು, ನೀವು ಈಗ ಆರೋಪಿಯಾಗಿದ್ದೀರಿ ಎಂದು ಬೆದರಿಸಿದ್ದರು. ಮನಿಲ್ಯಾಂಡರಿಂಗ್ ಕೇಸ್ ಸಂಬಂಧ ನಿಮ್ಮ ಖಾತೆಯ ಮಾಹಿತಿ ನಮಗೆ ಬೇಕಾಗಿದ್ದು, ಅಕೌಂಟಲ್ಲಿರುವ ಹಣವನ್ನು ನಮಗೆ ವರ್ಗಾಯಿಸಿ. ತನಿಖೆ ಮುಗಿದ ನಂತರ ನಿಮ್ಮ ಹಣ ಖಾತೆಗೆ ಜಮೆ ಆಗುತ್ತದೆ ಎಂದಿದ್ದರು. ಹೀಗಾಗಿ ಮಹಿಳೆ ತಮ್ಮ ಖಾತೆಯಲ್ಲಿದ್ದ 5.52 ಲಕ್ಷ ಹಣ ವರ್ಗಾವಣೆ ಮಾಡಿದ್ದರು. ಇತ್ತ ಖದೀಮರು ತಮ್ಮ ಖಾತೆಗೆ ಹಣ ಜಮೆಯಾದ ತಕ್ಷಣ ಕರೆ ಕಟ್ ಮಾಡಿದ್ದಾರೆ. ಮಹಿಳೆ ಎಷ್ಟೇ ಸಂಪರ್ಕಿಸಲು ಪ್ರಯತ್ನಿಸಿದರು ಸಾಧ್ಯವಾಗಿಲ್ಲ. ಇದರಿಂದ ತಾನೂ ಮೋಸ ಹೋದೆ ಎಂಬುದನ್ನು ಅರಿತ ಮಹಿಳೆ ಆಗ್ನೇಯ ವಿಭಾಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.