ನಡೆದು ಹೋಗುತ್ತಿದ್ದ ಒಂಟಿ ಮಹಿಳೆ ಮೇಲೆ ದುಷ್ಕರ್ಮಿ ಹೀಗೆ ಮಾಡೋದಾ
ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಒಂಟಿ ಮಹಿಳೆಯನ್ನು ಅಡ್ಡಗಟ್ಟಿ ದುಷ್ಕರ್ಮಿಯೊಬ್ಬ ಮಾಡಬಾರದ ಕೆಲಸ ಮಾಡಿದ್ದಾನೆ.
ಬೆಂಗಳೂರಿನ ಮಾರತಹಳ್ಳಿಯ ಮಾಕ್ಸ್ ಶೋರೂಮ್ ಮುಂಭಾಗ ಮಹಿಳೆ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಕೆಜಿ ಹಳ್ಳಿ ನಿವಾಸಿ ವಿಘ್ನೇಶ್ ಎಂಬ ಕಳ್ಳನು ಮಹಿಳೆಯ ಚಿನ್ನದ ಸರಕ್ಕೆ ಹೊಂಚು ಹಾಕಿ ಅಡ್ಡಗಟ್ಟಿ ಚಿನ್ನದ ಸರವನ್ನು ಕಿತ್ತು ಎಸ್ಕೇಪ್ ಆಗುತ್ತಿದ್ದನು.
ಇದೇ ವೇಳೆ ಕಳ್ಳತನದ ದೃಶ್ಯವನ್ನು ಗಮನಿಸಿದ ಆಟೋ ಚಾಲಕ ಹನುಮಂತ ಎಂಬಾತ ಕಳ್ಳನನ್ನು ಹಿಂಬಾಲಿಸಿಕೊಂಡು ಹೋಗಿ ಕಳ್ಳನ ದ್ವಿಚಕ್ರ ವಾಹನಕ್ಕೆ ಆಟೋವನ್ನು ಡಿಕ್ಕಿ ಹೊಡೆಸಿದ್ದಾನೆ. ಆಗ ಮತ್ತೆ ಕಳ್ಳ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಸ್ಥಳೀಯರು ಕೂಡಲೇ ಕಳ್ಳನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ರು.