ಕೆಲವೇ ಕ್ಷಣಗಳಲ್ಲಿ ತಲುಪಲಿದೆ ಉನ್ನಾವೋ ಸಂತ್ರಸ್ತೆಯ ಪಾರ್ಥಿವ ಶರೀರ

ಶನಿವಾರ, 7 ಡಿಸೆಂಬರ್ 2019 (13:20 IST)
ನವದೆಹಲಿ: ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಮೃತದೇಹವನ್ನು ವಿಮಾನ ಮೂಲಕ ಆಕೆಯ ತವರಿಗೆ ರವಾನಿಸಲಾಗುತ್ತಿದ್ದು, ಇಂದೇ ಅಂತ್ಯಸಂಸ್ಕಾರ ನಡೆಯುವ ಸಾಧ್ಯತೆಯಿದೆ.


ತನ್ನ ಮೇಲೆ ಕಳೆದ ವರ್ಷ ಅತ್ಯಾಚಾರವಾದ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಲು ಹೋಗುತ್ತಿದ್ದಾಗ ಮತ್ತೆ ಅದೇ  ಆರೋಪಿಗಳು ಆಕೆಯನ್ನು ಜೀವಂತ ದಹನ ಮಾಡಲು ಯತ್ನಿಸಿದ್ದರು. ಈ ವೇಳೆ ಆಕೆ ತೀವ್ರ ಗಾಯಗೊಂಡು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಳು. ಆದರೆ ಗಾಯ ಗಂಭೀರವಾಗಿದ್ದರಿಂದ ನಿನ್ನೆ ರಾತ್ರಿ ದೆಹಲಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

ಇದೀಗ ಆಕೆಯ ಮೃತದೇಹವನ್ನು ತವರಿಗೆ ರವಾನಿಸಲಾಗುತ್ತಿದೆ. ಇಂದು ಸಂತ್ರಸ್ತೆಯ ಮನೆಗೆ ಭೇಟಿ ನೀಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಸಾಂತ್ವನಿಸಿದರು. ಅಲ್ಲದೆ, ಆಕೆ ಬೇಡಿಕೊಂಡಿದ್ದರೂ ಭದ್ರತೆ ಒದಗಿಸದೇ ಇದ್ದಿದ್ದು ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಎಸ್ ಪಿ ನಾಯಕ ಅಖಿಲೇಶ್ ಯಾದವ್ ಸಂತ್ರಸ್ತೆಗೆ ನ್ಯಾಯ ಕೊಡಿಸಿ ಎಂದು ಧರಣಿ ಕೂತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಸಿಎಂ ಯೋಗಿ ಆದಿತ್ಯನಾಥ್ ಪ್ರಕರಣದ ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ