ಅನರ್ಹ ಪ್ರಭಾವಿ ಶಾಸಕ ಹೋಗಿದ್ದೆಲ್ಲಿಗೆ?

ಗುರುವಾರ, 5 ಸೆಪ್ಟಂಬರ್ 2019 (20:04 IST)
ಅನರ್ಹ ಪ್ರಭಾವಿ ಶಾಸಕರು ರವಿ ರೆಡ್ಡಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.

ಮಂಡ್ಯ ರೈತರ ಜೀವನಾಡಿ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆಗೆ ಅನರ್ಹ ಶಾಸಕ ಡಾ.ನಾರಾಯಣಗೌಡ ಭೇಟಿ ನೀಡಿದ್ದು, ಕಬ್ಬು ಬೆಳೆಗಾರರ ಸಮಸ್ಯೆಗಳ ನಿವಾರಣೆಯ ಬಗ್ಗೆ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ರವಿರೆಡ್ಡಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಮಂಡ್ಯದ ಕೆ.ಆರ್.ಪೇಟೆ  ರೈತರು ಬೆಳೆದಿರುವ ಕಬ್ಬನ್ನು ಕಾರ್ಖಾನೆಗೆ ಸರಬರಾಜು ಮಾಡಲು ಮೊದಲ ಆದ್ಯತೆಯ ಮೇರೆಗೆ ಕಟಾವು ಮಾಡಿಸಲು ಅನುಮತಿ ಕೊಡಿಸಬೇಕು.
ಕಬ್ಬು ಕಟಾವು ಮಾಡಲು ಅತ್ಯಾಧುನಿಕ ತಂತ್ರಜ್ಞಾನದ ಕಬ್ಬು ಕಟಾವು ಯಂತ್ರವನ್ನು ತರಿಸಿ ಕಬ್ಬು ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ರು.

ನಾರಾಯಣಗೌಡ, ಕಬ್ಬು ಕಟಾವು ಮಾಡುವ ವೆಚ್ಚವನ್ನು ಪ್ರತಿ ಟನ್ನಿಗೆ ಇಂತಿಷ್ಟು ಹಣವೆಂದು ನಿಗದಿಪಡಿಸಿ ರೈತರ ಮೇಲೆ ನಡೆಯುವ ಶೋಷಣೆ ತಪ್ಪಿಸಬೇಕಿದೆ ಎಂದ್ರು.

ರೈತರ ಜಮೀನಿನಿಂದ ಕಾರ್ಖಾನೆಗೆ ತರುವ ಕಬ್ಬನ್ನು ರಸ್ತೆಗೆ ಬೀಳಿಸಿ ಹಾಳು ಮಾಡದೇ ಸುರಕ್ಷಿತವಾಗಿ ಕಾರ್ಖಾನೆಗೆ ತರಲು ಲಾರಿಗಳು ಮತ್ತು ಟ್ರಾಕ್ಟರ್ ಚಾಲಕರಿಗೆ ನಿರ್ದೇಶನ ನೀಡಬೇಕು ಎಂದ್ರು.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ