ಅನರ್ಹ ಶಾಸಕರ ಬಿಗ್ ಶಾಕ್ ನೀಡಿದ ಸುಪ್ರೀಂ ಕೋರ್ಟ್

ಸೋಮವಾರ, 26 ಆಗಸ್ಟ್ 2019 (11:32 IST)
ನವದೆಹಲಿ : ಅನರ್ಹ ಶಾಸಕರ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ ಮಾಡಿರುವ ಮೂಲಕ ಅನರ್ಹ ಶಾಸಕರಿಗೆ ಬಿಗ್ ಶಾಕ್ ನೀಡಿದೆ.
ಶಾಸಕರ ಅನರ್ಹತೆ ಪ್ರಶ್ನಿಸಿ ತುರ್ತು ವಿಚಾರಣೆಗೆ ಅರ್ಜಿ ಸಲ್ಲಿಸಿದ ವಕೀಲ ಮುಕುಲ್ ರೊಹ್ಟಗಿ ನ್ಯಾ. ಎನ್.ವಿ. ರಮಣ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಅನರ್ಹತೆ ಪ್ರಶ್ನಿಸಿ ಅರ್ಜಿ ತುರ್ತು ವಿಚಾರಣೆಗೆ ಕೋರ್ಟ್ ನಕಾರ ಮಾಡಿದೆ.


ಇದರಿಂದ ಕಾಂಗ್ರೆಸ್ ಜೆಡಿಎಸ್ ಭಿನ್ನ ನಾಯಕರಿಗೆ ಟೆನ್ಷನ್ ಶುರುವಾಗಿದ್ದು, ಯಡಿಯೂರಪ್ಪ ಸಂಪುಟ ಸೇರುವ ವಲಸಿಗರ ಆಸೆಗೆ ಸುಪ್ರೀಂ ಕೋರ್ಟ್ ತಣ್ಣೀರು ಎರಚಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ