ಅನಂತ್‌ ಕುಮಾರ್‌ ಹೆಗಡೆಗೆ ಬುದ್ದಿ ಹೇಳಿದ ಸಿ.ಟಿ. ರವಿ

geetha

ಬುಧವಾರ, 17 ಜನವರಿ 2024 (16:20 IST)
ಚಿಕ್ಕಮಗಳೂರು :ರಾಮ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವವನು. ಅನಂತ್‌ ಕುಮರ್‌ ಅವರ ಹೇಳಿಕೆಯಲ್ಲಿ ಸತ್ಯವಿದೆ. ಮೊಘಲ್‌ ದೊರೆಗಳ ಸಮಯದಲ್ಲಿ 42 ಸಾವಿರ ದೇಗುಲಗಳನ್ನು ಧ್ವಂಸ ಮಾಡಿ ಮಸೀದಿ ನಿರ್ಮಿಸಿರುವುದು ನಿಜ. ಆದರೆ ಭಾರತೀಯ ಮುಸಲ್ಮಾನರು ದಾಳಿಕೋರರೊಡನೆ ಗುರುತಿಸಿಕೊಳ್ಳುವುದಿಲ್ಲ ಎಂದು ನುಡಿದ ಸಿ.ಟಿ. ರವಿ, ಇನ್ನೊಬ್ಬರ ಸ್ಥಳದ ಮೇಲೆ ಆಕ್ರಮಣ ಮಾಡಿ ಕಟ್ಟಿರುವ ಮಸೀದಿಯಲ್ಲಿ ನಮಾಜ್‌ ಮಾಡಿದರೆ ಅದು ಹರಾಮ್ ಎಂದು ಅನಿಸಬಹುದೆಂದು ಹೇಳಿದ್ದಾರೆ. 

ಸಿಎಂ ಸಿದ್ದರಾಮಯ್ಯ ವಿರುದ್ದ ಸಂಸದ ಅನಂತ್‌ ಕುಮಾರ್ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಬೆಂಬಲಿಸುವುದಿಲ್ಲ ಎಂದು ಮಾಜಿ ಶಾಸಕ ಸಿ.ಟಿ. ರವಿ ಹೇಳಿದ್ದಾರೆ. ಮಂಗಳವಾರ ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಹಿರಿಯ ಸ್ಥಾನಕ್ಕೆ ಯಾವ ಗೌರವ ನೀಡಬೇಕೋ ಅದನ್ನು ನೀಡಲೇಬೇಕು.  ಇನ್ನೊಬ್ಬರ ಮನಸಿಗೆ ನೋವುಂಟು ಮಾಡುವಂತೆ ಮಾತನಾಡಬಾರದು ಎಂದರು. 

ಘಜನಿ, ಘೋರಿಗಳ ಜೊತೆ ಗುರುತಿಸಿಕೊಳ್ಳುವ ಮುಸ್ಲಿಮರ ಅಪಾಯಕಾರಿ ಮನಸ್ಥಿತಿಯನ್ನು ನಾವು ಸಹಿಸಿಕೊಳ್ಳಲಾಗುವುದಿಲ್ಲ. ಶಿಶುನಾಳ ಶರೀಫರು , ಅಬ್ದುಲ್‌ ಕಲಾಂ ಅವರು ಆದರ್ಶವಾಗಬೇಕು ಎಂದು ಸಿ.ಟಿ ರವಿ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ