ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಅನಂತ ಕುಮಾರ್ ಅಂತಿಮ ಕ್ಷಣಗಳು
ಲಾಲ್ ಬಾಗ್ ಪಶ್ಚಿಮ ದ್ವಾರದ ಬಳಿಯ ಅವರ ನಿವಾಸದಿಂದ ಬೆಳಿಗ್ಗೆಯೇ ಆರಂಭವಾದ ಅವರ ಅಂತಿಮ ಯಾತ್ರೆ ಎಸ್ ಪಿ ಸಮಾಜ ರಸ್ತೆ, ಮಿನರ್ವ ಸರ್ಕಲ್, ಭಾಷ್ಯಂ ಸರ್ಕಲ್ ಮಾರ್ಗವಾಗಿ ಮಲ್ಲೇಶ್ವರದತ್ತ ಸಾಗಿದೆ.
ಈ ಸಂದರ್ಭದಲ್ಲಿ ಸಾವಿರಾರು ಜನರು ಅವರಿಗೆ ಭಾವುಕ ವಿದಾಯ ಹೇಳಿದ್ದಾರೆ. ಇಂದು ಮಧ್ಯಾಹ್ನ ಚಾಮರಾಜಪೇಟೆಯ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಬ್ರಾಹ್ಮಣ ಸಂಪ್ರದಾಯದಂತೆ ಅವರ ಅಂತಿಮ ಕ್ರಿಯೆಗಳು ನಡೆಯಲಿದೆ. ಸಹೋದರ ನಂದಕುಮಾರ್ ಅನಂತ ಕುಮಾರ್ ಅಂತಿಮ ವಿಧಿ ವಿಧಾನ ನೆರವೇರಿಸಲಿದ್ದಾರೆ.