ಅಂಗಡಿಗಳ ರೋಲಿಂಗ್ ಶೆಡ್ಡರ್ ಒಡೆದು ಕಳ್ಳತನ ಮಾಡಿದ ಆರೋಪಿ ಅಂದರ್

geetha

ಭಾನುವಾರ, 28 ಜನವರಿ 2024 (14:40 IST)
ಬೆಂಗಳೂರು-ಅಂಗಡಿಗಳ ರೋಲಿಂಗ್ ಶೆಡ್ಡರ್ ಒಡೆದು ಕಳ್ಳತನ ಪ್ರಕರಣ ಸಂಬಂಧ ಕೃತ್ಯ ಎಸಗಿದ್ದ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ.ಆದಿತ್ಯ ಹಾಗೂ ವರುಣ್ ಬಂಧಿತ ಆರೋಪಿಗಳಾಗಿದ್ದು,ಮಲ್ಲೇಶ್ವರಂ ಪೊಲೀಸರಿಂದ ಆರೋಪಿಗಳ ಬಂಧನ ಮಾಡಲಾಗಿದೆ.ಜ. 7ನೇ ತಾರೀಖು ಆರೋಪಿಗಳು ಕೃತ್ಯ ಎಸಗಿದ್ದರು.ಸಂಪಿಗೆ ರಸ್ತೆಯ 15ನೇ ಕ್ರಾಸ್ ನಲ್ಲಿ ಅಂಗಡಿ ಶೆಡ್ ಒಡೆದು ಕಳ್ಳತನ ಮಾಡಿದ್ದಾರೆ.

ಅಂಗಡಿಯಲ್ಲಿದ್ದ ಹಣ ಕಳ್ಳತನ ಮಾಡಿಕೊಂಡು ಆರೋಪಿಗಳು ಎಸ್ಕೇಪ್ ಆಗಿದ್ದರು.ಈ ಸಂಬಂಧ ತನಿಖೆ ನಡೆಸಿ ಆರೋಪಿಗಳ ಬಂಧನ ಮಾಡಲಾಗಿದೆ.ಬಂಧಿತರಿಂದ 40ಸಾವಿರ ನಗದು, ಒಂದು ದ್ವಿಚಕ್ರ ವಾಹನ, ಎರಡು ಮೊಬೈಲ್ ಜಪ್ತಿ ಮಾಡಲಾಗಿದೆ.ನಗರದ ಹದಿಮೂರು ಕಡೆ ಆರೋಪಿಗಳು ಕೃತ್ಯ ಎಸಗಿದ್ದರು.ಸದ್ಯ ಆರೋಪಿಗಳನ್ನ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ