ಸರಕಾರದಿಂದ ಮತ್ತೊಂದು ವಿವಾದ? ; ದೇವಸ್ಥಾನಗಳಿಗೆ ಡ್ರೆಸ್ ಕೋಡ್ ಕಡ್ಡಾಯ?
ರಾಜ್ಯ ಸರಕಾರವು ಇನ್ಮುಂದೆ ಪ್ರಖ್ಯಾತ ದೇವಸ್ಥಾನಗಳಿಗೆ ಭೇಟಿ ನೀಡೋರಿಗೆ ಡ್ರೆಸ್ ಕೋಡ್ ಜಾರಿಗೆ ತರೋಕೆ ಚಿಂತನೆ ನಡೆಸಿದ್ದು, ಇದು ವಿವಾದಕ್ಕೆ ಕಾರಣವಾಗೋ ಲಕ್ಷಣಗಳು ಗೋಚರಿಸಿವೆ.
ಹೀಗಾಗಿ ದೇವಸ್ಥಾನಕ್ಕೆ ಪ್ರವೇಶ ಮಾಡೋ ಭಕ್ತರಿಗೆ ಯಾವ ರೀತಿ ಡ್ರೆಸ್ ಕೋಡ್ ಇರಬೇಕು ಅನ್ನೋ ಕುರಿತು ಸರಕಾರ ಚಿಂತನೆ ನಡೆಸುತ್ತಿದೆ. ಶೀಘ್ರದಲ್ಲೇ ಧಾರ್ಮಿಕ ಪರಿಷತ್ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ವಸ್ತ್ರ ಸಂಹಿತೆ ಬಗ್ಗೆ ಚರ್ಚೆ ನಡೆಯೋ ಸಾಧ್ಯತೆ ಇದೆ.