ದತ್ತ ಪೀಠದಲ್ಲಿ ಮತ್ತೊಂದು ವಿವಾದ..!
ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಪೀಠದಲ್ಲಿ ವಿವಾದದ ಮೇಲೆ ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಮಾಂಸದೂಟ, ಗೋರಿಪೂಜೆ ಬಳಿಕ ಮತ್ತೊಂದು ವಿವಾದ ಹುಟ್ಟಿಕೊಂಡಿದ್ದು, ಮುಜರಾಯಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎನ್ನಲಾಗ್ತಿದೆ. ದತ್ತಪೀಠದ ಆವರಣದಲ್ಲೇ ಮುಸ್ಲಿಮರು ನಮಾಜ್ ಮಾಡಿದ್ದಾರೆ. ಆವರಣ ಮಾತ್ರವಲ್ಲ ಗುಹೆಯ ಒಳಗೂ ಮುಸ್ಲಿಮರಿಂದ ನಮಾಜ್ ಮಾಡಲಾಗಿದೆ ಎನ್ನಲಾಗ್ತಿದೆ. ಜಿಲ್ಲಾಡಳಿತದಿಂದ ನೇಮಿಸಲ್ಪಟ್ಟ ಮುಜಾವರ್ರಿಂದ ಮಾತ್ರ ದತ್ತ ಪಾದುಕೆ, ಗೋರಿಗಳಿಗೆ ಪೂಜೆಗೆ ಅವಕಾಶ ನೀಡಲಾಗಿದೆ. ಕೋರ್ಟ್ ಆದೇಶವನ್ನ ಗಾಳಿಗೆ ತೂರಿದ ಮುಸ್ಲಿಮರು. ಕೋರ್ಟ್ ಆದೇಶದ ಅನ್ವಯ ಆವರಣ ಸೇರಿ ಗುಹೆ ಒಳಗೆ ಪ್ರಾರ್ಥನೆ, ನಮಾಜ್, ಪೂಜೆ ಸಲ್ಲಿಸಲು ಅವಕಾಶವಿಲ್ಲ.. ದತ್ತಭಕ್ತರು ಸೇರಿದಂತೆ ಮುಸ್ಲಿಂರಿಗೂಯಾವುದೇ ಪೂಜೆ-ಪುನಸ್ಕಾರಕ್ಕೆ ಅವಕಾಶವಿಲ್ಲ..ಸರ್ಕಾರ ಹಾಗೂ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ತಪ್ಪಿತಸ್ಥರನ್ನು ಪತ್ತೆ ಮಾಡಿ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಭಜರಂಗದಳ ಸದಸ್ಯರು ಆಗ್ರಹಿಸಿದ್ದಾರೆ.