ಬೆಂಗಳೂರಿನಲ್ಲಿ ಬೀಗ ಹಾಕಿರುವ ಮನೆಗಳನ್ನೇ ಟಾರ್ಗೆಟ್ ಮಾಡ್ತಿದ್ದ ಗ್ಯಾಂಗ್ ಕೊನೆಗೂ ಖಾಕಿ ಬಲೆಗೆ ಬಿದ್ದಿದೆ.ಕಳ್ಳತನ ಮಾಡುತ್ತಿದ್ದ ಮೂವರು ಖದೀಮರನ್ನ ನಗರದ ವಿದ್ಯಾರಣ್ಯಪುರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಬಂಧಿತ ಮನೆಗಳ್ಳರಿಂದ 49 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. 26 ಬಾರಿ ಕಳ್ಳತನ ಮಾಡಿ ಜೈಲಿಗೆ ಹೋಗಿದ್ದರೂ ಮತ್ತದೇ ಕಸುಬು ಮುಂದುವರೆಸಿದ್ರು.. ಶ್ರೀನಿವಾಸ ಅಲಿಯಾಸ್ ಕರಾಟೆ ಸೀನ, ಸತೀಶ ಅಲಿಯಾಸ್ ಕೊಕ್ಕರೆ, ರಾಜಣ್ಣ ಅಲಿಯಾಸ್ ಕರಡಿ ಬಂಧಿತ ಆರೋಪಿಗಳಾಗಿದ್ದಾರೆ..ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್, ಓರ್ವ ಮನೆ ಹೊರಗೆ ನಿಂತು ನೋಡಿಕೊಳ್ಳುತ್ತಿದ್ರೆ, ಇಬ್ಬರಿಂದ ಕೃತ್ಯ ಎಸಗಲಾಗುತ್ತಿತ್ತು . ಕದ್ದ ಚಿನ್ನಾಭರಣ ಮಾರಾಟ ಮಾಡಿ ಬಂದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ರು.ಈ ಕುರಿತು ವಿದ್ಯಾರಣ್ಯಪುರ ಪೊಲೀಸರಿಂದ ಪ್ರಕರಣ ದಾಖಲಾಗಿದೆ.