ಬೆಂಗಳೂರಿನಲ್ಲಿ ಫ್ಲೆಕ್ಸ್ ಅಳವಡಿಸಿದ್ರೆ ಕ್ರಿಮಿನಲ್ ಕೇಸ್ ಹಾಕಲು ಮುಂದಾದ ಬಿಬಿಎಂಪಿ
ರಾಜಧಾನಿ ಬೆಂಗಳೂರಿನಲ್ಲಿ ಫ್ಲೆಕ್ಸ್ , ಬ್ಯಾನರ್, ಬಂಟಿಂಗ್ ಅಳವಡಿಸುವವರ ವಿರುದ್ಧ ಸಮರ ಸಾರಲು ಬಿಬಿಎಂಪಿ ಮುಂದಾಗಿದೆ.ಇದೇ ವಿಷಯವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಎಚ್ಚರಿಕೆ ನೀಡಿದ್ದಾರೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್ , ಬ್ಯಾನರ್, ಅಳವಡಿಕೆ ಸಂಬಂಧ ನೂರು ಕೇಸ್ ದಾಖಲಿಸಲಾಗಿದೆ.ಪ್ರತಿ ವಲಯದಲ್ಲಿ ತಲಾ 5 ಕ್ರಿಮಿನಲ್ ಕೇಸ್ ದಾಖಲಿಸುವಂತೆ ಚೀಫ್ ಕಮಿಷನರ್ ಖಡಕ್ ಸೂಚನೆ ನೀಡಲಾಗಿದೆ.ಬ್ಯಾನರ್, ಫ್ಲೆಕ್ಸ್ , ಹಾಕಿದವರ ಮೇಲೆ ಕ್ರಮ ಕೈಗೊಳ್ಳದಿದ್ದರೇ ವಲಯ ಮೇಲಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ