ಕಲ್ಲಂಗಡಿ ಹಣ್ಣನ್ನು ತಿನ್ನುವಾಗ ಈ ಬಗ್ಗೆ ಗಮನಿಸಿ. ಇಲ್ಲವಾದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ
ಮಂಗಳವಾರ, 25 ಜೂನ್ 2019 (09:13 IST)
ಬೆಂಗಳೂರು : ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಿದ ಕಲ್ಲಂಗಡಿ ಹಣ್ಣನ್ನು ತಿಂದರೆ ಅನಾರೋಗ್ಯಕ್ಕೊಳಗಾಗುವುದು ಖಂಡಿತ. ಆದ್ದರಿಂದ ಕಲ್ಲಂಗಡಿ ಹಣ್ಣನ್ನು ಕೊಳ್ಳುವಾಗ ಹಾಗೂ ಕಟ್ ಮಾಡಿ ತಿನ್ನವಾಗ ಈ ಬಗ್ಗೆ ಸರಿಯಾಗಿ ಗಮನಿಸಿ.
*ಹಳದಿ ಬಣ್ಣದ ಸಿಪ್ಪೆಯನ್ನು ಹೊಂದಿರುವ ಕಲ್ಲಂಗಡಿ ಹಣ್ಣಿನಲ್ಲಿ ವಿಷಕಾರಿ ನೈಟ್ರೇಟ್ಸ್ ಗಳಿರುತ್ತದೆ. ಹಾಗೇ ಇದನ್ನು ಕತ್ತರಿಸಿದಾಗ ಹಣ್ಣಿನ ಮೇಲೆ ಗೆರೆ-ಗೆರೆ ಇದ್ದರೆ ತಿನ್ನಬೇಡಿ.
*ಕಲ್ಲಂಗಡಿ ಹಣ್ಣು ಬೇಗ ಹಣ್ಣಾಗಲು ಹಾರ್ಮೋನ್ ಇಂಜೆಕ್ಷನ್ ಬಳಸುತ್ತಾರೆ. ಆದ್ದರಿಂದ ಹಣ್ಣನ್ನು ಕೊಳ್ಳುವಾಗ ಅದರಲ್ಲಿ ರಂಧ್ರವಿದೆಯೇ ಎಂಬುದನ್ನು ಗಮನಿಸಿ.
* ಒಂದು ಲೋಟ ನೀರಿಗೆ ಸ್ವಲ್ಪ ಕಲ್ಲಂಗಡಿ ತುಂಡುಗಳನ್ನು ಹಾಕಿ. ನೀರು ಪಿಂಕ್ ಬಣ್ಣಕ್ಕೆ ಬದಲಾದರೆ ಅಂಥ ಕಲ್ಲಂಗಡಿ ತಿನ್ನುವುದು ಒಳ್ಳೆಯದಲ್ಲ ಎಂದರ್ಥ.
* ಕಲ್ಲಂಗಡಿಯನ್ನು ಎತ್ತಿದಾಗ ಅದು ಭಾರ ಅನಿಸದಿದ್ದರೆ ಅವು ಸರಿಯಾಗಿ ಬಲಿತಿಲ್ಲ ಎಂದರ್ಥ.
*ಚೆನ್ನಾಗಿ ಹಣ್ಣಾದ . ಕಲ್ಲಂಗಡಿ ಹಣ್ಣಿನ ಮೇಲ್ಮೈ ಹೊಳಪಿನಿಂದ ಕೂಡಿರುತ್ತದೆ ಎಂಬುದನ್ನು ಮರೆಯಬೇಡಿ.