ಸಚಿವ ಸಂಪುಟದ ಬಳಿಕ ಸಿಎಂಗೆ ಎದುರಾಗಿದೆ ಮತ್ತೊಂದು ತಲೆನೋವು

ಬುಧವಾರ, 21 ಆಗಸ್ಟ್ 2019 (11:47 IST)
ಬೆಂಗಳೂರು : ಸಚಿವ ಸಂಪುಟದ ಬಳಿಕ ಇದೀಗ ಸಿಎಂ ಯಡಿಯೂರಪ್ಪ ಅವರಿಗೆ ಖಾತೆ ಹಂಚಿಕೆಯ ವಿಚಾರದಲ್ಲಿ ತಲೆಬಿಸಿ ಶುರುವಾಗಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟ ರಚನೆಯಾಗಿದೆ . 17 ಶಾಸಕರು , ರಾಜಭವನದಲ್ಲಿ ನಿನ್ನೆ ನಡೆದ ಸರಳ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಸಚಿವ ಸ್ಥಾನ ಹಂಚಿಕೆಯಲ್ಲಿ ಬಾರೀ ಅಸಮಾಧಾನ ಬುಗಿಲೆದ್ದಿದ್ದು, ಅದೇರೀತಿ ಇದೀಗ ಖಾತೆ ಹಂಚಿಕೆಯಲ್ಲಿ ಎಡವಟ್ಟು ಆಗದಂತೆ ಸಿಎಂ ಎಚ್ಚರಿಕೆ ವಹಿಸಿದ್ದಾರೆ ಎನ್ನಲಾಗಿದೆ.


ಈಗಾಗಲೇ ಗ್ರಾಮೀಣಾಭಿವೃದ್ಧಿ ಖಾತೆ ಲೋಕೋಪಯೋಗಿ ಮತ್ತು ಜಲಸಂಪನ್ಮೂಲ, ಇಂಧನ ಖಾತೆಗೆ ಹಲವು ಬೇಡಿಕೆ ಇಟ್ಟಿದ್ದ ಹಿನ್ನಲೆಯಲ್ಲಿ ಅಳೆದು ತೂಗಿ ಹಂಚಿಕೆ ಮಾಡಲು ಸಿಎಂ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ