ಚಿಕ್ಕ ಮಕ್ಕಳಿಗೆ ಅಪ್ಪಿತಪ್ಪಿಯೂ ಈ ಆಹಾರಗಳನ್ನು ನೀಡಬೇಡಿ

ಬುಧವಾರ, 21 ಆಗಸ್ಟ್ 2019 (09:29 IST)
ಬೆಂಗಳೂರು : ಚಿಕ್ಕ ಮಕ್ಕಳಿಗೆ ಆಹಾರ ನೀಡುವಾಗ ತುಂಬಬಾ ಎಚ್ಚರವಾಗಿರಬೇಕು. ಮೊದಲ 3 ತಿಂಗಳು ಮಗುವಿಗೆ ಕೇವಲ ತಾಯಿಯ ಎದೆ ಹಾಲು ಮಾತ್ರ ನೀಡಬೇಕು. ಆರು ತಿಂಗಳ ಧಾನ್ಯಗಳನ್ನು, ಇತರ ಹಾಲನ್ನು ನೀಡಬಹುದು. ಆದರೆ 6 ನಂತರ ತಾಯಿಯ ಹಾಲಿನ ಜೊತೆಗೆ ಈ  ಆಹಾರಗಳನ್ನು ನೀಡಬಾರದು.




ಬೀಜಗಳು, ನೆಲಗಡಲೆ ಮತ್ತು ಬೆಣ್ಣೆ ಇದು ದೊಡ್ಡ ಮಕ್ಕಳಿಗೆ ಮಾತ್ರ ಸೂಕ್ತವಾದದ್ದು, ಇದನ್ನು ಚಿಕ್ಕ ಮಕ್ಕಳಿಗೆ ನೀಡಿದರೆ ದೊಡ್ಡ ಮಟ್ಟದ ಅಪಾಯಕಾರಿ ಅಲರ್ಜಿ ಉಂಟಾಗಬಹುದು.


ಮೀನುಗಳು ಮತ್ತು ಸಮುದ್ರದ ಆಹಾರಗಳು ಕೆಲವು ಕುಟುಂಬದವರಿಗೆ ಅಲರ್ಜಿ ಉಂಟುಮಾಡಬಹುದು. ಅಂತವರು ನಿಮ್ಮ ಮಕ್ಕಳಿಗೆ ಈ ಆಹಾರವನ್ನು ನೀಡುವ ಮುನ್ನ ಮಕ್ಕಳ ತಜ್ಞರ ಸಲಹೆ ಪಡೆಯುವುದು ಉತ್ತಮ. ಆದ್ದರಿಂದ 1 ವರ್ಷದ ನಂತರ ಮಾತ್ರವೇ ಮಕ್ಕಳಿಗೆ ಈ ಪುಡ್ ನ್ನು ನೀಡುವುದು ಉತ್ತಮ.


ಜೇನುತುಪ್ಪವನ್ನು ಕೆಲವರು ಮಕ್ಕಳಿಗೆ ಹೆಚ್ಚಾಗಿ ನೀಡುತ್ತಾರೆ. ಇದರಿಂದ ಸ್ನಾಯು ಪಾರ್ಶವಾಯು ಹಾಗೂ ಇತರ ಗಂಭೀರ ರೋಗಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ಚಿಕ್ಕಮಕ್ಕಳಿಗೆ 1 ವರ್ಷದ ನಂತರ ಜೇನುತುಪ್ಪ ನೀಡುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ