ರೌಡಿಶೀಟರ್ ಮೇಲೆ ಎರಡು ಮೂರು ಬಾರಿ ಕಾರು ಹತ್ತಿಸಿದ ಮತ್ತೊಬ್ಬ ರೌಡಿಶೀಟರ್..!

ಬುಧವಾರ, 22 ಮಾರ್ಚ್ 2023 (18:00 IST)
ಅವ್ರಿಬ್ರೂ ರೌಡಿ ಶೀಟರ್ ಗಳೇ.. ಒಟ್ಟಿಗೆ ಓಡಾಡ್ತಿದ್ದ ಸ್ನೇಹಿತರೇ.. ಆಸ್ತಿ ವಿಚಾರವೊಂದಕ್ಕೆ ಈಗ ದುಷ್ಮನ್ ಗಳಾಗಿದ್ದಾರೆ.. ಮಾತಾಡೋಣ ಅಂತಾ ಸ್ನೇಹಿತನನ್ನ ಕರೆದವ ಸೀದಾ ಅವನ ಮೇಲೆ ಎರಡು ಮೂರು ಬಾರಿ ಕಾರು ಹತ್ತಿಸೇಬಿಟ್ಟ.. ಇಲ್ಲಿ ಕಾರು ಹತ್ತಿಸಿದವ್ನೂ ರೌಡಿ ಶೀಟ್.. ಹತ್ತಿಸಿಕೊಂಡವ್ನೂ ರೌಡಿಶೀಟರ್ ಆದ್ರೆ ಘಟನೆ ನಡೆದಿದ್ದು ಮಾತ್ರ ಸಚಿವೆ ಮನೆ ಮುಂದೆ.ರೌಡಿಶೀಟರ್ ಮೇಲೆ ಮತ್ತೊಬ್ಬ ರೌಡಿ ಶೀಟರ್ ಕಾರು ಹತ್ತಿಸಿ ಕೊಲೆ ಯತ್ನ ಮಾಡಿರೋ ಘಟನೆ ಜೆ.ಸಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.. ಅದು ಸಚಿವೆ ಶಶಿಕಲಾ ಜೊಲ್ಲೆ ಮನೆ ಮುಂದೆಯೇ..! ಗಗನ್ ಶರ್ಮಾ ಎಂಬ ಹೈಗ್ರೌಂಡ್ಸ್ ರೌಡಿ ಶೀಟರ್ ಮೇಲೆ ಸುನೀಲ್ ಕುಮಾರ್ ಎಂಬ ಮತ್ತೊಬ್ಬ ರೌಡಿಶೀಟರ್ ಎರಡು ಮೂರು ಬಾರಿ ಅಸ್ಸೆಂಟ್ ಕಾರು ಹತ್ತಿಸಿ ಕೊಲೆ ಯತ್ನ ಮಾಡಿದ್ದಾನೆ ಅನ್ನೋ ಆರೋಪ ಕೇಳಿ ಬಂದಿದೆ.. 21ನಿನ್ನೆ ಬೆಳ್ಳಂ ಬೆಳಗ್ಗೆ ಗಗನ್ ಮೇಲೆ ಸುನೀಲ್ ಆ್ಯಂಡ್ ಗ್ಯಾಂಗ್ ಹಲ್ಲೆ ಮಾಡಿದ್ದಲ್ದೆ ಕಾರು ಹತ್ತಿಸಿ ಅಲ್ಲೇ‌ ಬಿಟ್ಟೋಗಿದ್ರು ಅನ್ನೋ ಮಾಹಿತಿ ಜೆ.ಸಿ ನಗರ ಠಾಣೆ ಪೊಲೀಸರಿಗೆ ಸಿಕ್ಕಿದೆ.

ಅಂದ್ಹಾಗೆ ಕಾರು ಹತ್ತಿಸಿರೋ ರೌಡಿಶೀಟರ್ ಸುನೀಲ್ ಕುಮಾರ್ ಮತ್ತು ಗಾಯಾಳು ಗಗನ್ ಇಬ್ಬರೂ ಸ್ನೇಹಿತರೇ.. ಗಗನ್, ಸುನೀಲ್, ಅರುಣ, ಕೃಷ್ಣ ಈ ನಾಲ್ವರು ಸ್ನೇಹಿತರು.. ಇದ್ರಲ್ಲಿ ಗಗನ್ ಮತ್ತು ಸುನೀಲ್ ಮಧ್ಯೆ ಆಸ್ತಿಯೊಂದರ ವಿಚಾರಕ್ಕೆ ಮನಸ್ತಾಪ ಉಂಟಾಗಿತ್ತು.. ಅದ್ರ ಬಗ್ಗೆ ಮಾತಾಡೋಕೆ ಅಂತಾ ಮಾರ್ಚ್ 20ರಂದು ಗಗನ್ ನನ್ನ ಕರೆಸಿಕೊಂಡಿದ್ದ ಸುನೀಲ್ ಆ್ಯಂಡ್ ಸ್ನೇಹಿತರು ರಾತ್ರಿ ಹತ್ತುಗಂಟೆ ಸುಮಾರಿಗೆ ಕರೆಸಿಕೊಂಡಿದ್ದ ಆರೋಪಿಗಳು ಅಲ್ಲಿಂದ ಕಾರಿನಲ್ಲಿ ಗಗನ್ ನ ಕೂರಿಸಿಕೊಂಡು ಸಿಟಿ ರೌಂಡ್ಸ್ ಹೊಡೆದಿದ್ದಾರೆ.. ನಂತರ 21ರ ಬೆಳಗ್ಗೆ ಜಯಮಹಲ್ ಬಳಿ ಬಂದು ಕಾರು ನಿಲ್ಲಿಸಿದ್ದಾರೆ.. ಕಾರಿನಲ್ಲಿರೋವಾಗ್ಲೇ ಗಲಾಟೆ ಶುರುವಾಗಿದ್ದು ದೊಣ್ಣೆ ಕೈಯಿಂದ ಗಗನ್ ಗೆ ಎಲ್ಲರೂ ಥಳಿಸಿದ್ದಾರೆ.. ನಂತರ ಕಾರಿಂದ ಕೆಳಗೆ ತಳ್ಳಿದೋರೆ ಎರಡು ಮೂರು ರೌಂಡ್ ಕಾರು ಹತ್ತಿಸಿ ಎಸ್ಕೇಪ್ ಆಗಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ