ಪೆಪ್ಪರ್ ಸ್ಪ್ರೇ ಮಾಡಿ 27 ಸಾವಿರ ದೋಚಿದ ರೌಡಿಶೀಟರ್ ಗಳು..!

ಬುಧವಾರ, 22 ಮಾರ್ಚ್ 2023 (15:00 IST)
ನಗರದಲ್ಲಿ ಡಕಾಯಿತಿ ಕಡಿಮೆಯಾಗಿದೆ ಎಂದೇ ಭಾವಿಸಲಾಗಿತ್ತು. ಆಗೊಮ್ಮೆ ಈಗೊಮ್ಮೆ ರಿಪೋರ್ಟ್ ಆಗ್ತಿತ್ತು. ಅಂತಹದ್ದೇ ಡಕಾಯಿತಿ  ನಗರದಲ್ಲಿ ನಡೆದುಹೋಗಿದೆ‌. ರೌಡಿಶೀಟರ್ ಗಳೇ ಈ ಡಕಾಯಿತಿಯನ್ನ ಮಾಡಿ ಅಂದರ್ ಆಗಿದ್ದಾರೆ.  ನಿಲ್ ,ಕಿಶನ್ , ಮನು ,ನಿತೀನ್ ಕುಮಾರ್@ಲೊಡ್ಡೆ, ಶಿವರಾಜ್@ ಪಾಪಿ,ರಂಜಿತ್ ಕುಮಾರ್ ಹಾಗು ಸಾಗರ್@ ಸಾಗಿ.. ಇವಿಷ್ಟು ಜನ ಮನೆಯೊಂದರಲ್ಲಿ ಡಕಾಯಿತಿ ನಡೆಸಿ ಪರಾರಿಯಾಗಿದ್ದರು. ಒಂದಷ್ಟು ಸಿಸಿಟಿವಿಗಳು, ಸಾಂಧರ್ಭಿಕ ಸಾಕ್ಷಿಗಳನ್ನ ಕಲೆ ಹಾಕಿದ್ದ ಪೊಲೀಸರು, ಕೊನೆಗೂ ಆರೋಪಿಗಳನ್ನ ಬಂಧಿಸಿದ್ದಾರೆ .ಈ ಘಟನೆ ನಡೆದಿದ್ದು, ಸೋಲದೇವನಹಳ್ಳಿಯ ದೊಡ್ಡ ಬ್ಯಾಲದ ಕೆರೆ ಬಳಿಯ ಮನೆಯೊಂದರಲ್ಲಿ.

ಬಂಧಿತರಲ್ಲಿ ಶಿವರಾಜ್@ ಪಾಪಿ ಬಸವೇಶ್ವರನಗರ ರೌಡಿಶೀಟರ್ . ಕಿಶನ್ ಹಾಗು ನಿತೀನ್@ ಲೊಡ್ಡೆ ಕೂಡ ರೌಡಿ ಆಸಾಮಿಗಳೆ. ಬಂಧಿತರಲ್ಲಿ ಕೆಲ ಆರೋಪಿಗಳು ಬೆಂಗಳೂರು ನಗರದವರೇ ಆಗಿದ್ದರೂ ಇವರೆಲ್ಲ ಕೃತ್ಯಗಳನ್ನ ನಡೆಸುತ್ತಿದ್ದಿದ್ದು, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ. ಇನ್ನು ಕಳೆದ 12 ನೇ ತಾರೀಕಿನಂದು ನಡೆದ ಘಟನೆ ಇದು .  ಮೋನು ಗೋಸ್ವಾಮಿ ಎಂಬ ಬಿಹಾರಿಯ ಮನೆಗೆ ಆತನ ಸ್ನೇಹಿತರಾದ ರಾಜು ಜಟಾಬ್ ,ಬಿಹಾರಿ ಗೋಸ್ವಾಮಿ ಹಾಗು ರವಿ ಶರ್ಮ ಎಂಬುವರ ಜೊತೆ ಮಾತನಾಡುತ್ತ ಕುಳಿತಿರುವಾಗ  ಈ ರೌಡಿ ಗ್ಯಾಂಗ್ ಮನೆ ಬಾಗಿಲು ಬಡಿದಿದೆ. ಮತ್ತೊಬ್ಬ ಸ್ನೇಹಿತನಿರಬೇಕು ಎಂದು ಬಾಗಿಲು ತೆಗೆದಾಗ ಏಕಾಏಕಿ ಒಳ ನುಗ್ಗಿ ಪೆಪ್ಪರ್ ಸ್ಪ್ರೇ ಮಾಡಿ ಮೊದಲು ಅಲ್ಲಿದ್ದವರ ಕೈಕಾಲು ಕಟ್ಟಿ ಹಾಕಿದ್ದಾರೆ‌ ನಂತರ ಬಿಹಾರಿ ಗೋಸ್ವಾಮಿ ಎಂಬಾತನಿಗೆ ಮಚ್ಚಿನಿಂದ ತಲೆಗೆ ಹಲ್ಲೆ ನಡೆಸಿ ಎಲ್ಲಾರನ್ನೂ ರೂಂನಲ್ಲಿ ಕೂಡಿ ಹಾಕಿದ್ದಾರೆ. ಹಾಗೆ ಅವರ ಬಳಿ ಇದ್ದ 27 ಸಾವಿರ ನಗದು ಹಾಗು ಮೊಬೈಲ್ ಗಳನ್ನ ದೋಚಿ ಅಲ್ಲಿಂದ ಪರಾರಿಯಾಗಿದ್ದರು. ತಕ್ಷಣ ಅಲರ್ಟ್ ಆದ ಪೊಲೀಸರು ವಿಶೇಷ ತಂಡವನ್ನ ರಚನೆ ಮಾಡಿ ಆರೋಪಿಗಳನ್ನ ಬಂಧಿಸಿದ್ದಾರೆ.ಇನ್ನು 60 ಕಿಲೋಮೀಟರ್ ವರೆಗುಹ  ಟೆಕ್ನಿಕಲಿ ಅನಾಲೈಸ್ ಮಾಡಿದ ಬಳಿಕ ಆರೋಪಿಗಳನ್ನ ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ