ಕ್ಷೇತ್ರ ಹುಡುಕಾಟಕ್ಕೆ ಕುಮಾರಸ್ವಾಮಿ ವ್ಯಂಗ್ಯ!

ಬುಧವಾರ, 22 ಮಾರ್ಚ್ 2023 (15:03 IST)
ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಮ್ಮ ಪಕ್ಷದಲ್ಲಿಯೇ ವಿರೋಧಿಗಳಿದ್ದು, ಅವರೇ ತಮ್ಮನ್ನ ಸೋಲಿಸುವ ಭಯ ಸಿದ್ದರಾಮಯ್ಯಗೆ ಕಾಡುತ್ತಿದೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ಪದ್ಮನಾಭನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಶಾಸಕಾಂಗ ನಾಯಕ, ವಿಪಕ್ಷ ನಾಯಕರಿಗೆ ಕ್ಷೇತ್ರ ಸಿಗದ ಸ್ಥಿತಿ ನಿರ್ಮಾಣ ಆಗಿದೆ. ವಿಪಕ್ಷ ನಾಯಕರು ಯಾವ ಕ್ಷೇತ್ರದಲ್ಲಿ ನಿಲ್ಲಬೇಕು ಅಂತ ಚರ್ಚೆ ಆಗುತ್ತಿದೆ. ರಾಷ್ಟ್ರೀಯ ಪಕ್ಷ, ಆ ಪಕ್ಷದ ಲೀಡರ್ ಅನ್ನು ಈ ಪರಿಸ್ಥಿತಿಗೆ ದೂಡಿದೆ ಅಂತ ಲೇವಡಿ ಮಾಡಿದ್ರು.

ಸಿದ್ದರಾಮಯ್ಯಗೆ ವಿರೋಧ ಪಕ್ಷಕ್ಕಿಂತ ಅವರ ಪಕ್ಷದವರೇ ವಿರೋಧಿಗಳು ಇದ್ದಾರೆ. ಅದಕ್ಕೆ ಅವರಿಗೂ ಆತಂಕ ಆಗಿದೆ. ಸಿದ್ದರಾಮಯ್ಯಗೆ ಅವರ ಪಕ್ಷದಲ್ಲಿ ವಿರೋಧಿಗಳು ಇದ್ದಾರೆ. ಆ ವಿರೋಧಿ ಟೀಂ ಸಿದ್ದರಾಮಯ್ಯ ಅವರನ್ನು ಮುಗಿಸುವ ಭಯ ಅವರಿಗೆ ಕಾಡುತ್ತಿದೆ. ಹೀಗಾಗಿ ಕ್ಷೇತ್ರದ ಗೊಂದಲ ಇದೆ. ಆದರೆ ನಮಗೆ ಅಂತಹ ಗೊಂದಲ ಇಲ್ಲ. 123 ಗುರಿಗೆ ಬೇಕಾದ ಅಭ್ಯರ್ಥಿಗಳು ನಮಗೆ ಇದ್ದಾರೆ ಅಂತ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ