ವಿಶ್ವವಿದ್ಯಾಲಯದಲ್ಲಿ ಮುಂದುವರೆದ ಮತ್ತೊಂದು ಸರಣಿ ಅಪಘಾತ

ಸೋಮವಾರ, 21 ನವೆಂಬರ್ 2022 (18:13 IST)
ವಿಶ್ವವಿದ್ಯಾಲಯದ ರಸ್ತೆಯಲ್ಲಿ ಮತ್ತೆ ಸರಣಿ ಅಪಘಾತ ಸಂಭವಿಸಿದೆ.ಶಿಲ್ಪ ಶ್ರೀ ಸಾವಿನ ಬಳಿಕ ಒಂಬತ್ತನೇ ಅಪಘಾತ ಇದ್ದಾಗಿದ್ದು,ಅಪಘಾತ ತಡೆಗೆ ಹಲವಾರು ಕ್ರಮಗಳನ್ನು ಕೈಗೊಂಡರು ಸಹ ಅಪಘಾತಗಳು ಮುಂದುವರೆಯುತ್ತಿದೆ.
 
 ವಿವಿ ಕೇಂದ್ರ ಕಚೇರಿ ಮತ್ತು ನಾಗರಭಾವಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅಪಘಾತ ನಡೆದಿದ್ದು,ಸಂವಹನ ಮತ್ತು ಬಯೋಟೆಕ್ ವಿಭಾಗದ ಮುಂದೆ ರಸ್ತೆ ಹುಬ್ಬುಗಳು ಇಲ್ಲದ ಕಾರಣ ನಡೆದಿರುವ ಅಪಘಾತ.ಪ್ರಧಾನಿ ಮೋದಿ ಕಾರ್ಯಕ್ರಮದಿಂದಾಗಿ ತೆರವುಗೊಳಿಸಿದ್ದ ಹಂಪ್ ಗಳು.ಕಾರ್ಯಕ್ರಮ ಮುಗಿದು ನಾಲ್ಕು ತಿಂಗಳಾದರೂ ಹಂಪ್  ಮರು ನಿರ್ಮಾಣವನ್ನ ಬಿಬಿಎಂಪಿ ಮಾಡಿಲ್ಲ.ಬಿಬಿಎಂಪಿ ನಿರ್ಲಕ್ಷದಿಂದಾಗಿ ಪ್ರತಿನಿತ್ಯ  ಆಕ್ಸಿಡೆಂಟ್ ಗಳು ಏರುತ್ತಿದೆ.ಹಲವಾರು ಬಾರಿ ಬಿಬಿಎಂಪಿ ಗಮನಕ್ಕೆ ತಂದರು  ಸಮಸ್ಯೆ ಬಗೆಹರಿಸಲು  ಬಿಬಿಎಂಪಿ ಮುಂದಾಗುತ್ತಿಲ್ಲ.
 
ಬಿಬಿಎಂಪಿಯ ಬೇಜವಾಬ್ದಾರಿ ಇಂದ ರಸ್ತೆ ಸುರಕ್ಷತೆ ಕುಗ್ಗುತ್ತಿದೆ.ವಾಹನ ದಟ್ಟಣೆಯಿಂದಾಗಿ ರಸ್ತೆದಾಟಲು  ಪ್ರತಿನಿತ್ಯ  ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ‌.ಇಂದು ಬೆಳಗ್ಗೆ ಸುಮಾರು 12 ಗಂಟೆಯಲ್ಲಿ ಅಪಘಾತ ಸಂಭವಿಸಿದ್ದು,ಸ್ವಿಫ್ಟ್ ಮತ್ತು ಸ್ವಿಫ್ಟ್ ಡಿಸೈರ್ ನಡುವೆ  ಅಪಘಾತ ಸಂಭವಿಸಿದೆ.ಬಯೋಟೆಕ್ ವಿಭಾಗದ ಮುಂದೆ ಮುಖಾಮುಖಿ ವಾಹನಗಳು ಎದುರಾಗಿದೆ. ಬಯೋಟೆಕ್ ಪ್ರಾಧ್ಯಾಪಕಿಯು ಬುಕ್ ಮಾಡಿದ ಯಲ್ಲೋ ಬೋರ್ಡ್ ವಾಹನ ರಭಸದಿಂದ ಬಂದಂತಹ ಖಾಸಗಿ ವಾಹನದಿಂದ ಡಿಕ್ಕಿ ಹೊಡೆದಿದೆ.ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ