ಮಠದ ಅಧೀನದಲ್ಲಿ ಶಿಕ್ಷಣ ಸಂಸ್ಥೆಗಳು ನಡೆಸಲಾಗುತ್ತಿದ್ದು, ಇಲ್ಲಿ ಕೆಲಸ ಮಾಡುವ ಮಹಿಳೆಯರು ಸ್ವಾಮಿಯ ಜೊತೆಗೆ ಮಂಚ ಹಂಚಿಕೊಳ್ಳಬೇಕಂತೆ. ಹೀಗೆ ಸ್ವಾಮೀಜಿ ಒಂದಲ್ಲ ಎರಡಲ್ಲ ಹಲವು ಮಹಿಳೆಯರ ಜೊತೆಗೆ ಚಕ್ಕಂದವಾಡಿದ್ದಾನೆ. ಈ ಸ್ವಾಮಜಿ ಶಿಕ್ಷಕಿಯರು, ಲೈಬ್ರೇರಿಯನ್ ಹಾಗೂ ಅಡುಗೆ ಮಾಡುವವರು ಸೇರಿದಂತೆ ಯಾರನ್ನೂ ಬಿಟ್ಟಿಲ್ಲ. ಎಲ್ಲರನ್ನು ಮಂಚವೇರಿಸಿದ್ದಾನೆ.
ಮಹಿಳೆಯರು ಮಾಡಿರೋ ಅಡುಗೆ, ಹೈಫೈ ಡ್ರಿಂಕ್ಸ್, ನಾನ್ ವೆಜ್ ಆಹಾರ ಪ್ರಿಯವಾಗಿದೆ. ಇನ್ನು ಈ ಸ್ವಾಮಿ ಬ್ಯಾಂಕಾಕ್, ಥೈವಾನ್ ನಿಂದ ಬಂದ ಮಹಿಳಾ ಭಕ್ತರ ಜೊತೆಯೂ ಚಕ್ಕಂದವಾಡಿದ್ದಾನೆ. ವೀರಶೈವ ಸಂಪ್ರದಾಯ ಈ ಸ್ವಾಮಿಗೆ ಅನ್ವಯ ಆಗೋದಿಲ್ವಂತೆ.
ಕಲ್ಮಠದ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಮಹಿಳೆಗೆ ಕಲ್ಮಠದಲ್ಲಿ ವಾಸ ಮಾಡಲು ಹೇಳಿ, ಶಿಕ್ಷಕಿಯ ಜೊತೆ ದೈಹಿಕ ಸಂಪರ್ಕ ಮಾಡಿದ್ದಾನೆ. ಈಗ ಶಿಕ್ಷಕಿ ನಿವೃತ್ತಿಯಾಗಿದ್ದಾಳೆ. ಆದರೆ, ಶಿಕ್ಷಕಿ ಮದುವೆಯಾಗದಂತೆ ನೋಡಿಕೊಂಡಿರುವ ಸ್ವಾಮಿ ಈಗ ಆಕೆಗೆ ವಯಸ್ಸಾಗುತ್ತಿದ್ದಂತೆ ಸ್ವಾಮೀಜಿ ಕೈ ಕೊಟ್ಟಿದ್ದಾನೆ.
ಗನ್ ಲೈಸೆನ್ಸ್ ಹೊಂದಿರುವ ಸ್ವಾಮಿ ತನಗೆ ಸಹಕರಿಸದಿದ್ರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕ್ತಾನೆ ಎನ್ನಲಾಗಿದೆ. 20 ವರ್ಷಗಳಿಂದ ಕಾಮಿಸ್ವಾಮಿ ಕಾಮದಾಟಕ್ಕೆ ಪರೋಕ್ಷವಾಗಿ ಸಹಕರಿಸ್ತಿದ್ದ ಡ್ರೈವರ್ ಈಗ ಸಹಕರಿಸದ್ದಕ್ಕೆ ಸಂಬಳ ಕೊಡದೆ ಕೆಲಸದಿಂದ ತಗೆದುಹಾಕಿದ್ದಾನೆ. ಗುಂಡಾಗಳಿಂದ ಡ್ರೈವರ್ ಮೇಲೆ ಹಲ್ಲೆ ಮಾಡಿಸಿದ್ದು ಡ್ರೈವರ್ ಮಲ್ಲಯ್ಯಸ್ವಾಮಿ ಕುಟುಂಬ ಜೀವಭಯದಲ್ಲಿ ಜೀವಿಸುತ್ತಿದೆ.