ರೈತರ ನಿದ್ದೆಗೆಡಿಸಿದ್ದ ಮತ್ತೊಂದು ಪುಂಡಾನೆ ಸೆರೆ
ರೈತರ ನಿದ್ದೆಗೆಡಿಸಿದ್ದ ಮತ್ತೊಂದು ಪುಂಡಾನೆ ಸೆರೆಯಾಗಿರೋ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಅಭಿಮನ್ಯು ಅಂಡ್ ಟೀಂ ಪುಂಡಾನೆಯನ್ನು ಸೆರೆಹಿಡಿದಿದೆ. ಅರಣ್ಯ ಇಲಾಖೆ ಹಾಗೂ ನಾಗರಹೊಳೆ ವೈದ್ಯರ ತಂಡ ಅರವಳಿಕೆ ನೀಡಿ ಪುಂಡಾನೆಯನ್ನ ಸೆರೆಹಿಡಿದಿದ್ದಾರೆ. ಕಳೆದ 5 ದಿನಗಳಿಂದ ಕಾರ್ಯಾಚರಣೆ ನಡೆಸಿ, ಕೊನೆಗೂ ಅರಣ್ಯ ಇಲಾಖೆಗೆ ತಲೆನೋವಾಗಿದ್ದ ಪುಂಡಾನೆಯನ್ನ ಕೊನೆಗೂ ಸೆರೆ ಹಿಡಿಯಲಾಗಿದೆ. ಇತ್ತೀಚೆಗಷ್ಟೇ ಅರಣ್ಯ ಇಲಾಖೆ ಒಂದು ಪುಂಡಾನೆ ಸೆರೆಹಿಡಿದಿದ್ದರು. ಚನ್ನಪಟ್ಟಣ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಇದೀಗ ಅರಣ್ಯ ಇಲಾಖೆ ಒಂದೊಂದೇ ಆನೆಯನ್ನ ಸೆರೆ ಹಿಡಿದು ಕಾಡಿಗಟ್ಟುತ್ತಿದ್ದಾರೆ.