ಹಿಂದೂ ವಿರೋಧಿ ಬಿಜೆಪಿ- ಪ್ರಮೋದ ಮುತಾಲಿಕ್ ವಾಗ್ದಾಳಿ

ಸೋಮವಾರ, 5 ಫೆಬ್ರವರಿ 2018 (21:39 IST)

ಹಿಂದೂ ಸಮಾಜವನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಹಿಂದೂಗಳ ತಲೆಯ ಮೇಲೆ ಕಾಲಿಟ್ಟು ಆಡಳಿತತ ನಡೆಸುತ್ತಿದೆ ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷದ್ ಮುಖ್ಯಸ್ಥ ಪ್ರವೀಣ್ ಭಾಯ್ ತೊಗಾಡಿಯಾ ಅವರನ್ನು ಎನ್ ಕೌಂಟರ್ ಮಾಡ ಹೊರಟವರು ಮೊದಲು ಹಿಂದೂ ವಿರೋಧಿ ಅಕ್ಬರುದ್ದೀನ್ ಓವೈಸಿಯನ್ನು ಎನ್ ಕೌಂಟರ್ ಮಾಡಬೇಕಿತ್ತು ಎಂದಿದ್ದಾರೆ.

ಹಿಂದೂಸ್ತಾನದಲ್ಲಿ ಹಿಂದೂ ಹೋರಾಟಗಾರರನ್ನು ಎನ್ ಕೌಂಟರ್ ಮಾಡಲು ಮುಂದಾಗಿದ್ದು ದುರಂತ. ತೊಗಾಡಿಯಾ ಅವರ ಎನ್ ಕೌಂಟರ್ ಮಾಡುವ ಬದಲು ಹಿಂದು ವಿರೋಧಿ ಅಕ್ಬರುದ್ದೀನ್ ಓವೈಸಿ ಎನ್ಕೌಂಟರ್ ಮಾಡಬೇಕಿತ್ತು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ