ಬಿಜೆಪಿ ಆಡಳಿತವಿರುವ ಸರಕಾರಗಳಲ್ಲಿ ಅಲ್ಪಸಂಖ್ಯಾತರಿಗೆ, ಪರಿಶಿಷ್ಟ ಜಾತಿಯವರಿಗೆ ರಕ್ಷಣೆಯೇ ಇಲ್ಲ-ಸಿಎಂ ಸಿದ್ದರಾಮಯ್ಯ

ಸೋಮವಾರ, 5 ಫೆಬ್ರವರಿ 2018 (14:05 IST)
ಬೆಂಗಳೂರು: 'ಐಟಿ-ಬಿಟಿ ಕ್ಷೇತ್ರದಲ್ಲಿ ಕರ್ನಾಟಕ ಈಗಲೂ ನಂ.1. ಶೇ. 38 ರಷ್ಟು ರಫ್ತು ಕರ್ನಾಟಕದಿಂದಲೇ ನಡೆಯುತ್ತಿದೆ. ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲೇ ನಂ.1,' ಎಂದು ರಾಜ್ಯದ ಸಾಧನೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಾರೆ.


ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿದ ಮೋದಿಗೆ ಉತ್ತರಿಸಿದ ಸಿಎಂ, 'ಗೋಧ್ರಾ ಗಲಾಟೆಯಲ್ಲಿ ಎಷ್ಟು ಜನ ಸತ್ತರು. ಬಿಜೆಪಿ ಆಡಳಿತವಿರುವ ಸರಕಾರಗಳಲ್ಲಿ ಅಲ್ಪಸಂಖ್ಯಾತರಿಗೆ, ಪರಿಶಿಷ್ಟ ಜಾತಿಯವರಿಗೆ ರಕ್ಷಣೆಯೇ ಇಲ್ಲ. ಈ ಬಗ್ಗೆ ತುಸು ಗಮನ ಹರಿಸಲಿ,' ಎಂದು ಕಿವಿಮಾತು ಹೇಳಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ